Select Your Language

Notifications

webdunia
webdunia
webdunia
webdunia

ರೂಪ್‌ ವೇ ದುರಂತ ರಕ್ಷಣಾ ಕಾರ್ಯ ಅಂತ್ಯ; 3ಕ್ಕೇರಿದ ಸಾವಿನ ಸಂಖ್ಯೆ

Deoghar ropeway accident ರೋಪ್‌ ವೇ ಅಪಘಾತ ಜಾರ್ಖಂಡ್
bengaluru , ಮಂಗಳವಾರ, 12 ಏಪ್ರಿಲ್ 2022 (15:54 IST)
ಜಾರ್ಖಂಡ್‌ ನ ದಿಯೋಘರ್‌ ನ ತ್ರಿಕೂಟ ಬೆಟ್ಟದಲ್ಲಿ ರೂಪ್‌ ವೇ ದುರಂತದ ರಕ್ಷಣಾ ಕಾರ್ಯ 40 ಗಂಟೆಗಳ ನಂತರ ಅಂತ್ಯಗೊಂಡಿದ್ದು, ಘಟನೆಯಲ್ಲಿ ಸಾವಿನ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ದಿಯೋಘರ್‌ ಬೆಟ್ಟದಲ್ಲಿ ಹಾಕಲಾಗಿರುವ ರೂಪ್‌ ವೇಯಲ್ಲಿ ಎರಡು ಕಾರ್‌ ಗಳ ನಡುವೆ ಡಿಕ್ಕಿ ಸಂಭವಿಸಿದ್ದರಿಂದ ಇಬ್ಬರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿದ್ದರು.
ಹೆಲಿಕಾಫ್ಟರ್‌ ಮೂಲಕ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಘಟನೆ ಸಂಭವಿಸಿ 36 ಗಂಟೆ ಕಳೆದರೂ ಇನ್ನೂ 14 ಮಂದಿ ರೂಪ್‌ ವೇನಲ್ಲಿ ಸಿಲುಕಿಕೊಂಡಿದ್ದಾರೆ.
ಈ ಮಧ್ಯ ರಕ್ಷಣಾ ಕಾರ್ಯಾಚರಣೆ ವೇಳೆ ಹಗ್ಗದ ಸಹಾಯದಿಂದ ಹೆಲಿಕಾಫ್ಟರ್‌ ಏರಬೇಕಿದ್ದ ಮಹಿಳೆಯನ್ನು ರಕ್ಷಣಾ ಸಿಬ್ಬಂದಿ ಕೈ ಹಿಡಿದು ಮೇಲಕ್ಕೆ ಎತ್ತಿಕೊಳ್ಳುವ ಜಾರಿ ಕೆಳಗೆ ಬಿದ್ದಿದ್ದಾರೆ. ಗಾಯಗೊಂಡಿರುವ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣ ತನಿಖೆಗೆ: ಸಿಎಂ ಬೊಮ್ಮಾಯಿ