Select Your Language

Notifications

webdunia
webdunia
webdunia
webdunia

ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣ ತನಿಖೆಗೆ: ಸಿಎಂ ಬೊಮ್ಮಾಯಿ

police karnataka basavartaja bommai
bengaluru , ಮಂಗಳವಾರ, 12 ಏಪ್ರಿಲ್ 2022 (14:28 IST)
ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣ ಕುರಿತು ಪೊಲೀಸ್‌ ತನಿಖೆಗೆ ಆದೇಶಿಸಲಾಗಿದ್ದು, ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತೋಷ್‌ ಆತ್ಮಹತ್ಯೆ ವೇಳೆ ಡೆತ್‌ ನೋಟ್‌ ನಲ್ಲಿ ಸಚಿವ ಕೆಎಸ್‌ ಈಶ್ವರಪಪ್ಪ ಕಾರಣ ಎಂದು ಬರೆದಿರುವುದು ಮಾಧ್ಯಮಗಳಲ್ಲಿ ಬಂದಿದೆ. ಈ ಬಗ್ಗೆ ಸತ್ಯಾಸತ್ಯತೆ ತಿಳಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದರು.
ಪೊಲೀಸರಿಗೆ ಕಾನೂನುಬದ್ಧವಾಗಿ ತನಿಖೆ ಮಾಡಲು ಆದೇಶಿಸಲಾಗಿದ್ದು, ತನಿಖೆಯ ವಿಷಯದಲ್ಲಿ ಸರಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನಾನೇನು ತಪ್ಪು ಮಾಡಿಲ್ಲ:‌ ಸಚಿವ ಕೆಎಸ್‌ ಈಶ್ವರಪ್ಪ ಸ್ಪಷ್ಟನೆ