32 ವಾಹನಗಳು, 4 ಟಾರ್ಗೆಟ್: ಬೆಚ್ಚಿ ಬೀಳಿಸುವಂತಿದೆ ಟೆರರ್ ಗ್ಯಾಂಗ್ ನ ಸ್ಟೋರಿ

Krishnaveni K
ಗುರುವಾರ, 13 ನವೆಂಬರ್ 2025 (13:40 IST)
ನವದೆಹಲಿ: ದೆಹಲಿ ಸ್ಪೋಟದ ರೂವಾರಿಗಳ ಸಂಚು ಒಂದೊಂದಾಗಿ ಬಯಲಾಗುತ್ತಿದೆ. ಈ ಗ್ಯಾಂಗ್ 32 ವಾಹನಗಳನ್ನು ಬಳಸಿ 4 ಪ್ರಮುಖ ಸ್ಥಳಗಳನ್ನು ಗುರಿಯಾಗಿರಿಸಿ ದಾಳಿ ಮಾಡುವ ಹುನ್ನಾರ ನಡೆಸಿದ್ದರು ಎಂಬ ಬೆಚ್ಚಿ ಬೀಳಿಸುವ ಅಂಶ ಹೊರಬೀಳುತ್ತಿದೆ.

ಇದಕ್ಕಾಗಿ 32 ಹಳೆಯ ವಾಹನಗಳನ್ನು ಖರೀದಿಸಿದ್ದ ಉಗ್ರರು ದೇಶದ ಪ್ರಮುಖ ನಾಲ್ಕು ಸ್ಥಳಗಳನ್ನು ಗುರುತು ಮಾಡಿಕೊಂಡಿದ್ದರು. ಈ ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಪೋಟ ನಡೆಸುವ ಯೋಜನೆ ಉಗ್ರರದ್ದಾಗಿತ್ತು. ಇದಕ್ಕೆ ಉಗ್ರರಿಂದ ವಶಪಡಿಸಿಕೊಳ್ಳಲಾದ ಭಾರೀ ಪ್ರಮಾಣದ ಸ್ಪೋಟಕವೇ ಸಾಕ್ಷಿ.

ಈ ಉಗ್ರ ಕೃತ್ಯಕ್ಕಾಗಿ ಭಯೋತ್ಪಾದಕರ ಗ್ಯಾಂಗ್ 20 ಲಕ್ಷ ರೂ. ಹಣ ಒಟ್ಟುಗೂಡಿಸಿತ್ತು. ಕಾರ್ಯಾಚರಣೆಯ ನೇತೃತ್ವ ಉಮರ್ ನದ್ದಾಗಿತ್ತು. ಆತನಿಗೆ ಹಣ ಸಂದಾಯ ಮಾಡಲಾಗಿತ್ತು. ಹೀಗಾಗಿ ಈಗ ಇವರಿಗೆ ಹಣಕಾಸಿನ ನೆರವು ನೀಡುತ್ತಿದ್ದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದೀಗ ಉಗ್ರ ಕೃತ್ಯಕ್ಕಾಗಿ ಖರೀದಿಸಲಾಗಿದ್ದು ಮತ್ತೊಂದು ಇಕೊ ಸ್ಪೋರ್ಟ್ಸ್ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಇವರಿಗೆ ಇನ್ನಷ್ಟು ಜನ ನೆರವಾಗಿರುವುದು ಖಚಿತವಾಗಿದೆ. ಹೀಗಾಗಿ ಇವರ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ, ಉತ್ತರ ಪ್ರದೇಶ ನಡುವೆ ರಾಮ ಸೀತೆಯ ಬಾಂಧವ್ಯವಿದೆ: ಯೋಗಿ

ಸಿದ್ದರಾಮಯ್ಯ ಸರ್ಕಾರದಲ್ಲೂ ಭ್ರಷ್ಟಾಚಾರವಿದೆ: ಸಂತೋಷ್ ಹೆಗ್ಡೆ

ದೆಹಲಿ ಸ್ಫೋಟ ಪ್ರಕರಣ, ಮತ್ತೆ ತೆರೆದ ಲಾಲ್ ಕ್ವಿಲಾ ಮೆಟ್ಟೋ ನಿಲ್ದಾಣ

ಬಿಹಾರ ಮಹಾಘಟಬಂಧನ್‌ಗೆ ಹೀನಾಯ ಸೋಲು, ಲಾಲು ಕುಟುಂಬದಲ್ಲಿ ಭಾರೀ ಬೆಳವಣಿಗೆ

ಶಬರಿಮಲೆ ಯಾತ್ರೆ ಶುರು, ದರ್ಶನಕ್ಕೆ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ

ಮುಂದಿನ ಸುದ್ದಿ
Show comments