ನವದೆಹಲಿ: ಹೈ ಫೈ ಇಂಗ್ಲಿಷ್, ದೊಡ್ಡ ದೊಡ್ಡ ಮಾತು.. ದೆಹಲಿ ಸ್ಪೋಟಕ್ಕೆ ಮುನ್ನ ಉಗ್ರ ಉಮರ್ ನಬಿ ಮಾಡಿದ್ದ ವಿಡಿಯೋವೊಂದು ಈಗ ವೈರಲ್ ಆಗಿದೆ.
ನವಂಬರ್ 10 ರಂದು ಡಾ ಉಮರ್ ನಬಿ ದೆಹಲಿಯ ಕೆಂಪುಕೋಟೆ ಬಳಿ ಐ20 ಕಾರು ಸ್ಪೋಟಿಸಿಕೊಂಡು ಆತ್ಮಾಹುತಿ ದಾಳಿ ಮಾಡಿ ಹಲವರ ಸಾವಿಗೆ ಕಾರಣವಾಗಿದ್ದ. ವೃತ್ತಿಯಲ್ಲಿ ವೈದ್ಯನಾಗಿದ್ದು, ವಿದ್ಯಾವಂತನಾಗಿದ್ದ ಈತ ಇಂತಹದ್ದೊಂದು ಹೇಯ ಕೃತ್ಯ ನಡೆಸುವ ಮುನ್ನ ಮಾಡಿದ್ದ ವಿಡಿಯೋ ಈಗ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಆತ ಹೈ ಫೈ ಇಂಗ್ಲಿಷ್ ನಲ್ಲಿ ಆತ್ಮಾಹುತಿ ದಾಳಿ ಬಗ್ಗೆ ಮಾತನಾಡುತ್ತಾನೆ. ಜನರಿಗೆ ಆತ್ಮಾಹುತಿ ದಾಳಿ ಬಗ್ಗೆ ತಪ್ಪು ಕಲ್ಪನೆಯಿದೆ. ಆದರೆ ಅದನ್ನು ನೀವು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದೆಲ್ಲಾ ಬಡ ಬಡಿಸುತ್ತಾನೆ.
ದೆಹಲಿ ಸ್ಪೋಟಕ್ಕೆ ಮುನ್ನ ಈತ ಅಲ್ ಫಲಾಹ್ ವಿವಿಯಲ್ಲಿ ಕೆಲಸ ಮಾಡುತ್ತಿದ್ದ. ಕೆಲವೇ ದಿನಗಳ ಮೊದಲು ಕೆಲಸ ಬಿಟ್ಟಿದ್ದ. ದಾಳಿಗೆ ಕೆಲವು ಸಮಯದ ಮೊದಲು ರಾಮಲೀಲ ಮೈದಾನ ಮತ್ತು ಸುನೇರಿ ಮಸೀದಿ ಬಳಿ ಓಡಾಡಿಕೊಂಡಿದ್ದ ಎಂದು ಪತ್ತೆಯಾಗಿದೆ.