ನವದೆಹಲಿ: ದೆಹಲಿ ಕಾರು ಸ್ಫೋಟ ಪ್ರಕರಣದಲ್ಲಿ ಗಾಯಗೊಂಡ ಇಬ್ಬರು ಇಂದು ಸಾವನ್ನಪ್ಪುವ ಮೂಲಕ ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಸೋಮವಾರ ದೃಢಪಡಿಸಿದ್ದಾರೆ.
ದೆಹಲಿ ಪೊಲೀಸರ ಪ್ರಕಾರ, ಗಾಯಗೊಂಡವರಲ್ಲಿ ಒಬ್ಬರು ನಿನ್ನೆ ಸಾವನ್ನಪ್ಪಿದರೆ, ವಿನಯ್ ಪಾಠಕ್ ಎಂಬ ಇನ್ನೊಬ್ಬ ಬಲಿಪಶು ಇಂದು ಸಾವನ್ನಪ್ಪಿದ್ದಾನೆ.
ನವೆಂಬರ್ 10 ರಂದು ದೆಹಲಿ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ಹುಂಡೈi20 ಕಾರೊಂದು ಸ್ಫೋಟಗೊಂಡಿತ್ತು. ಈ ಭೀಕರ ದುರಂತದಲ್ಲಿ 13 ಜನರು ಮೃತಪಟ್ಟಿದ್ದರು. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಎನ್‌ಐಎ ಜಮ್ಮು ಮತ್ತು ಕಾಶ್ಮೀರದ ಪಾಂಪೋರ್‌ನ ಸಂಬೂರ ನಿವಾಸಿ ಅಮೀರ್ ರಶೀದ್ ಅಲಿಯನ್ನು ಬಂಧಿಸಿದೆ. ಇದೀಗ ಪ್ರಕರಣ ಸಂಬಂಧ ಎನ್‌ಐಎ ತೀವ್ರ ತನಿಖೆ ನಡೆಸುತ್ತಿದೆ.