Select Your Language

Notifications

webdunia
webdunia
webdunia
webdunia

ತಂದೆಯ ಪೆನ್ ಷನ್ ಹಣಕ್ಕೇ ಕನ್ನ ಹಾಕಿದ ಮಗಳು

ಕಳ್ಳತನ
ನವದೆಹಲಿ , ಸೋಮವಾರ, 30 ಮೇ 2022 (09:00 IST)
ನವದೆಹಲಿ: ತಂದೆಯ ಪೆನ್ ಷನ್ ಹಣಕ್ಕೆ ಕೈ ಹಾಕಿದ ಮಗಳು ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ತಂದೆಯ ಖಾತೆಯಿಂದ ಸುಮಾರು 2 ಲಕ್ಷ ರೂ. ಎಗರಿಸಿದ್ದ ಮಗಳು ಅಡವಟ್ಟಿದ್ದ ತನ್ನ ಚಿನ್ನಾಭರಣ ಮರಳಿ ಪಡೆಯಲು ಬಳಸಿದ್ದಳು. ತನ್ನ ವಂಚನೆ ಗೊತ್ತಾಗಬಾರದೆಂದು ಒಟಿಪಿ, ಸಂದೇಶಗಳನ್ನು ಆ ಕ್ಷಣವೇ ಡಿಲೀಟ್ ಮಾಡುತ್ತಿದ್ದಳು.

ಮಗಳ ವಂಚನೆ ಗೊತ್ತಿಲ್ಲದೇ ತಂದೆ ತನ್ನ ಖಾತೆಯಿಂದ ಹಣ ಡ್ರಾ ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದಾಗ ಮಗಳೇ ಮೊಬೈಲ್ ಬ್ಯಾಂಕಿಂಗ್ ಮೂಲಕ ಹಣ ಡ್ರಾ ಮಾಡಿರುವುದು ಗೊತ್ತಾಗಿದೆ. ಇದೀಗ ಆರೋಪಿ ಮಗಳನ್ನು ವಶಕ್ಕೆ ಪಡೆಯಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

500 ಅಡಿ ಆಳ ಪ್ರಪಾತಕ್ಕೆ ಬಿದ್ದ ಕಾರು: 5 ಪ್ರವಾಸಿಗರು ದುರ್ಮರಣ