Publish Date: Sat, 28 May 2022 (09:20 IST)
Updated Date: Sat, 28 May 2022 (09:24 IST)
ಲಕ್ನೋ: ಅನುಮಾನವೆಂಬ ರೋಗಕ್ಕೆ ಮದ್ದಿಲ್ಲ ಎಂಬುದು ಈ ಘಟನೆಯಿಂದ ಮತ್ತೆ ಸಾಬೀತಾಗಿದೆ. 75 ವರ್ಷದ ತಾತಪ್ಪನಿಗೆ ತನ್ನ 66 ವರ್ಷದ ಹೆಂಡತಿ ಶೀಲದ ಮೇಲೆ ಶಂಕೆ! ಕೊನೆಗೆ ಆತ ಮಾಡಿದ್ದೇನು ಗೊತ್ತಾ?
ತನ್ನ ಪತ್ನಿ ನಡತೆ ಬಗ್ಗೆ ಅನುಮಾನ ಹೊಂದಿದ್ದ ತಾತ ಆಕೆ ಮಲಗಿದ್ದಾಗ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ. ಇತ್ತೀಚೆಗೆ ತಾತನಿಗೆ ತನ್ನ ಪತ್ನಿ ನಡತೆ ಮೇಲೆ ಸಂಶಯ. ಹೀಗಾಗಿ ಎಲ್ಲೇ ಹೋಗುವುದಿದ್ದರೂ ಆಕೆಯನ್ನು ಜೊತೆಗೇ ಕರೆದೊಯ್ಯುತ್ತಿದ್ದ. ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳವೂ ಆಗುತ್ತಿತ್ತು. ಆದರೆ ಈ ಬಾರಿ ಆಕೆ ಮಲಗಿ ನಿದ್ರಿಸುತ್ತಿದ್ದಾಗ ಕೊಲೆಯನ್ನೇ ಮಾಡಿದ್ದಾನೆ.
ನೆರೆಹೊರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ತಾತನನ್ನು ಬಂಧಿಸಿದ್ದಾರೆ. ಈ ವೇಳೆ ತಾತ ತಪ್ಪೊಪ್ಪಿಕೊಂಡಿದ್ದಾನೆ.