ಮಹಾರಾಷ್ಟ್ರದ ಪುಣೆಯ ನಿವಾಸಿಯೊಬ್ಬರ ಅಕೌಂಟ್‌ನಿಂದ ಸೈಬರ್ ವಂಚಕರು 18 ಲಕ್ಷ ರೂ. ಗೂ ಹೆಚ್ಚು ಹಣ ಎಗರಿಸಿರುವ ಘಟನೆ ಬೆಳಕಿಗೆ ಬಂದಿದೆ.
ಹಣ ಎಗರಿಸಿದ್ದು ಮಾತ್ರವಲ್ಲದೆ ಅವರ ಹೆಸರಲ್ಲಿ ಅವರದೇ ಅಕೌಂಟ್ ಮೂಲಕ ವೈಯಕ್ತಿಕ ಸಾಲವನ್ನೂ ಪಡೆದಿದ್ದಾರೆ. ರಿಮೋಟ್ ಆಕ್ಸೆಸ್ ಆ್ಯಪ್‌ವೊಂದರ ಮೂಲಕ ಅಕ್ಟೋಬರ್ 11 ಮತ್ತು 12 ರ ನಡುವೆ ಆ ವ್ಯಕ್ತಿಯ ಅಕೌಂಟ್‌ನಿಂದ ಒಟ್ಟು 18.35 ಲಕ್ಷ ರೂ.ಗಳನ್ನು ವಂಚಿಸಿದ್ದಾರೆ ಎಂದು ತಿಳಿದುಬಂದಿದೆ.