Webdunia - Bharat's app for daily news and videos

Install App

ಮಹಿಳೆಯ ಮೇಲೆ ರೇಪ್ ಎಸಗಿ ರಸ್ತೆಯ ಮೇಲೆ ಬಿಸಾಕಿ ಹೋದ ಕಾಮುಕರು

Webdunia
ಗುರುವಾರ, 30 ನವೆಂಬರ್ 2023 (14:29 IST)
ಮಹಿಳೆಯ ಮೇಲೆ ರೇಪ್ ಎಸಗಿ ರಸ್ತೆಯ ಮೇಲೆ ಬಿಸಾಕಿ ಹೋದ ಕಾಮುಕರಿಂದ ನಗ್ನ ಸ್ಥಿತಿಯಲ್ಲಿ ದೇಹದ ತುಂಬಾ ಗಾಯಗಳೊಂದಿಗೆ ಬೆತ್ತಲೆಯಾಗಿ ಬಿದ್ದಿದ್ದ ಮಹಿಳೆಯನ್ನು ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
 
ದೆಹಲಿಯ ನಿರ್ಭಯ್ ರೇಪ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹೇಯ ಅತ್ಯಾಚಾರ ಘಟನೆ ವರದಿಯಾಗಿದೆ.ಲಾರಿಯೊಂದರ ಚಾಲಕ ಮತ್ತು ಕ್ಲೀನರ್ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿ ನಗ್ನ ಸ್ಥಿತಿಯಲ್ಲಿಯೇ ಚಲಿಸುತ್ತಿರುವ ಲಾರಿಯಿಂದ ಕೆಳಕ್ಕೆ ಎಸೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
 
ಮನೆಗೆಲಸ ಮಾಡಿಕೊಂಡಿದ್ದ 30 ವರ್ಷ ವಯಸ್ಸಿನ ಮಹಿಳೆ ಮೇದಕ್ ಜಿಲ್ಲೆಯ ರಾಮಾಯಾಪೇಟ್‌ನಿಂದ ಹೈದ್ರಾಬಾದ್‌ಗೆ ತೆರಳುತ್ತಿರುವ ಲಾರಿಯನ್ನು ಹತ್ತಿದ್ದಾಳೆ. ಲಾರಿ ಚಾಲಕ ಮತ್ತು ಕ್ಲೀನರ್ ಆಕೆಯ ಮೇಲೆ ಅತ್ಯಾಚಾರವೆಸಗಿ ವಾರಂಗಲ್ ಜಿಲ್ಲೆಯ ಬಚನ್ನಾಪೇಟ್‌ ಮಂಡಲ್ ವ್ಯಾಪ್ತಿಯ ತಮ್ಮಾಡ್‌ಪಲ್ಲಿ ಗ್ರಾಮದ ಬಳಿ ಚಲಿಸುತ್ತಿರುವ ಲಾರಿಯಿಂದ ಕೆಳಕ್ಕೆ ಎಸೆದು ಪರಾರಿಯಾಗಿದ್ದಾರೆ
 
ಬಚಾನ್ನಾಪೇಟ್ ಪೊಲೀಸ್ ಠಾಣೆಯ ಅಧಿಕಾರಿ  ಮಾತನಾಡಿ, ಅತ್ಯಾಚಾರಕ್ಕೊಳಗಾದ ಮಹಿಳೆಯ ಮೇಲೆ ಗಂಭೀರವಾದ ಗಾಯಗಳಿವೆ. ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ. ಕೆಲ ಗ್ರಾಮಸ್ಥರು ಲಾರಿಯನ್ನು ಹಿಂಬಾಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.
 
ಪೊಲೀಸರು ಆರೋಪಿ ಲಾರಿ ಚಾಲಕ ಮತ್ತು ಕ್ಲೀನರ್‌ನನ್ನು ದೇವರುಪ್ಪುಲಾ ಗ್ರಾಮದ ಬಳಿ ಬಂಧಿಸಲಾಗಿದೆ. ಆರೋಪಿ ಚಾಲಕ ಕೃಷ್ಣ ಜಿಲ್ಲೆಯವನಾಗಿದ್ದಾನೆ. ಅತ್ಯಾಚಾರಕ್ಕೊಳಗಾದ ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಅತ್ಯಾಚಾರಕ್ಕೊಳಗಾದ ಮಹಿಳೆಗೆ ಲಾರಿ ಚಾಲಕ ಮತ್ತು ಕ್ಲೀನರ್ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ ನಂತರ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Dehli Airport: ಭಾರೀ ಮಳೆಗೆ ಸೋರುತ್ತಿದೆ ಛಾವಣಿ, Video Viral

ಮಗನ ಇನ್ನೊಂದು ಸಂಬಂಧ ತಿಳಿಯುತ್ತಿದ್ದ ಹಾಗೇ RJDಯಿಂದ ಉಚ್ಛಾಟಿಸಿದ ಲಾಲು

18 ಬಿಜೆಪಿ ಶಾಸಕರ ಅಮಾನತು ವಾಪಾಸ್ ಪಡೆಯುವ ಮುನ್ಸೂಚನೆ ಕೊಟ್ಟ ಸ್ಪೀಕರ್ ಯುಟಿ ಖಾದರ್‌

ಆಪರೇಷನ್ ಸಿಂಧೂರ್‌ ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಭಾರತದ ಪ್ರತಿಬಿಂಬ: ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ

ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿ ಭಾರತ: ಐದನೇ ಸ್ಥಾನಕ್ಕೆ ಜಾರಿದ ಜಪಾನ್‌

ಮುಂದಿನ ಸುದ್ದಿ