ಬೆಡ್ ಸಿಗದೇ ಮಗು ಸಾವು -ನಿಮಾನ್ಸ್ ಮುಂದೆ ನಿಮಾನ್ಸ್ ಚಾಲಕರ ಧರಣಿ

Webdunia
ಗುರುವಾರ, 30 ನವೆಂಬರ್ 2023 (14:20 IST)
ಬೆಡ್ ಸಿಗದೇ ನಿಮ್ಹಾನ್ಸ್ ಅಸ್ಪತ್ರೆಯಲ್ಲಿ ಮಗು ಸಾವು  ಪ್ರಕರಣ ಸಂಬಂಧ ಇಂದು ಕುಟುಂಬದವರು ಹಾಗೂ ಆಂಬುಲೆನ್ಸ್ ಚಾಲಕರಿಂದ ಪ್ರತಿಭಟನೆ ನಡೆಸಲಾಗಿದೆ.ಆಸ್ಪತ್ರೆಯ ಆವರಣದಲ್ಲಿ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಲಾಗಿದೆ.
 
ಬಡವರ ಮಕ್ಕಳಿಗೆ ಒಂದು ನ್ಯಾಯ... VIP ಗಳಿಗೆ ಆಸ್ಪತ್ರೆಯಲ್ಲಿ ಬೇರೆಯದ್ದೇ ನ್ಯಾಯ ,ದೊಡ್ಡ ದೊಡ್ಡವರು ಕಾಲ್ ಮಾಡಿದ್ರೆ ಬೆಡ್ ಸಿಗುತ್ತೆ, ಟ್ರೀಟ್ಮೆಂಟ್ ಮಾಡ್ತಾರೆ.ಬಡವರು ದೂರದೂರಿನಿಂದ ಬಂದ್ರೂ ಆಸ್ಪತ್ರೆಯ ಗೇಟ್ ಒಳಗೂ ಬಿಡಲ್ಲ ಪ್ರಥಮ ಚಿಕಿತ್ಸೆಯೂ ಕೊಡಲ್ಲ.ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಇಲ್ಲ ಅಂತಾನೇ ಬಣ್ಣ ಬಣ್ಣದ ಕಾಗೆ ಹಾರಿಸ್ತಾರೆ ಅಂತ ಆಂಬ್ಯುಲೆನ್ಸ್ ಚಾಲಕರು ಕಿಡಿಕಾರಿದ್ದಾರೆ.
 
ಸದ್ಯ ಸ್ಥಳೀಯ ಪೊಲೀಸರಿಗೆ ಎಂಎಲ್ ಸಿ ರಿಪೋರ್ಟ್  ನಿಮ್ಹಾನ್ಸ್ ವೈದ್ಯರು ಕಳಿಸಿದ್ದಾರೆ.ನಿಮಾನ್ಸ್ ಆಸ್ಪತ್ರೆ ವ್ಯಾಪ್ತಿಯ  ಸಿದ್ದಾಪುರ ಪೊಲೀಸರಿಗೆ ಎಂಎಲ್ ಸಿ ರಿಪೋರ್ಟ್ ರವಾನೆ ಮಾಡಿದ್ದಾರೆ.
 
ಸಿದ್ದಾಪುರ ಪೊಲೀಸರಿಂದ ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಠಾಣೆಗೆ ರಿಪೋರ್ಟ್ ರವಾನೆ ಮಾಡಲಾಗಿದೆ.ಈಗಗಲೇ ಎಂಎಲ್ ಸಿ ರಿಪೋರ್ಟ್ ನ್ನ ಗೋಣಿ ಬೀಡು ಪೊಲೀಸ್ ಠಾಣೆಗೆ ಸಿದ್ದಾಪುರ ಪೊಲೀಸರು ರವಾನಿಸಿದ್ದಾರೆ.ಇಂದು ಬೆಳಗ್ಗೆ ನಿಮ್ಹಾನ್ಸ್ ಅಸ್ಪತ್ರೆಗೆ ಗೋಣಿ ಬೀಡು ಪೊಲೀಸರು ಭೇಟಿ ನೀಡಿ ಆಸ್ಪತ್ರೆಯಿಂದ ಮಾಹಿತಿ ಕಲೆ ಹಾಕಲೊದ್ದಾರೆ. ಬಳಿಕ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮಗುವಿನ ಮೃತದೇಹ ಹಸ್ತಾಂತರ ಮಾಡಲಿದ್ದಾರೆ.ಮೃತದೇಹ ಸಿಕ್ಕ ಬಳಿಕ ಮತ್ತೆ ಆಂಬ್ಯುಲೆನ್ಸ್ ಚಾಲಕರು ಹಾಗೂ ಮಗುವಿನ ಕುಟುಂಬದಿಂದ ಪ್ರತಿಭಟನೆ ಮಾಡಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇರಳದಲ್ಲಿ ಮೊದಲ ಬಾರಿಗೆ ಗೆಲುವಿಗೆ ಪ್ರಧಾನಿ ಮೋದಿಗೆ ಖುಷಿಯೋ ಖುಷಿ

ಜನವರಿ 6 ಕ್ಕೆ ಡಿಕೆ ಶಿವಕುಮಾರ್ ಸಿಎಂ: ಇಕ್ಬಾಲ್ ಹುಸೇನ್ ಮಾತಿಗೆ ಡಿಕೆಶಿ ಹೇಳಿದ್ದೇನು

ತಿರುವನಂತಪುರಂನಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು

ಕಾಂಗ್ರೆಸ್ಸಿಗೆ ಯತೀಂದ್ರ ಹೈಕಮಾಂಡ್ ಆಗಿದ್ದಾರಾ: ವಿಜಯೇಂದ್ರ

ಡಿಕೆ ಶಿವಕುಮಾರ್ ಸಿಎಂ ಆಗುವ ದಿನಾಂಕ ಫಿಕ್ಸ್: ಸ್ಪೋಟಕ ಹೇಳಿಕೆ ನೀಡಿದ ಆಪ್ತ ಶಾಸಕ

ಮುಂದಿನ ಸುದ್ದಿ
Show comments