Select Your Language

Notifications

webdunia
webdunia
webdunia
webdunia

ಬಾಲಕಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿ ಹೀಗಾ ಮಾಡೋದು

ಬಾಲಕಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿ ಹೀಗಾ ಮಾಡೋದು
ಉತ್ತರ ಪ್ರದೇಶ , ಶುಕ್ರವಾರ, 4 ಸೆಪ್ಟಂಬರ್ 2020 (09:32 IST)
ಉತ್ತರ ಪ್ರದೇಶ : 15 ವರ್ಷದ ಬಾಲಕಿಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿ ಮೂವರು ಕಾಮುಕರು ಆಕೆಯ ಮೇಲೆ ಮಾನಭಂಗ ಎಸಗಿದ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿಗಳು ಬಾಲಕಿಯನ್ನು ನಿರ್ಜನ ಸ್ಥಳಕ್ಕೆ ಕರೆದು ಮಾನಭಂಗ ಮಾಡಲು ಪ್ರಯತ್ನಿಸಿದ್ದಾರೆ. ಆ ವೇಳೆ ಬಾಲಕಿ ವಿರೋಧಿಸಿದ್ದಕ್ಕೆ ಆಕೆಯನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಹಲ್ಲೆ ಮಾಡಿ ಬಳಿಕ ಇಬ್ಬರು ಮಾನಭಂಗ ಮಾಡಿದ್ದಾರೆ ಅದರಲ್ಲಿ ಒಬ್ಬ ಕೃತ್ಯವನ್ನು ವಿಡಿಯೋ ಮಾಡಿ ಯಾರಿಗಾದರೂ ತಿಳಿಸಿದರೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಬಳಿಕ ಈ ವಿಚಾರ ತಿಳಿದ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದ ಕಾರಣ ಪೊಲೀಸರು ಇಬ್ಬರು ಅತ್ಯಾಚಾರಿಗಳನ್ನು ಬಂಧಿಸಿದ್ದಾರೆ. ಮೂರನೇಯವ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಡುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಹಾಯ ಕೇಳಿದ ಯುವತಿಯ ಮೇಲೆ ಮಾಜಿ ಯೋಧ ಮಾಡಿದ್ದೇನು ಗೊತ್ತೇ?