Select Your Language

Notifications

webdunia
webdunia
webdunia
webdunia

Covid 19: ಮತ್ತೆ ಶುರುವಾಯ್ತು ಕೊರೋನಾ ಹಾವಳಿ: ಈಗ ಬಂದಿರುವ ಹೊಸ ವೈರಸ್ ಯಾವುದು

Covid 19

Krishnaveni K

ನವದೆಹಲಿ , ಮಂಗಳವಾರ, 20 ಮೇ 2025 (14:52 IST)
ನವದೆಹಲಿ: ಭಾರತದಲ್ಲಿ ಮತ್ತೆ ಕೊರೋನಾ ಹಾವಳಿ ಶುರುವಾಗಿದೆ. ಈಗ ಬಂದಿರುವ ಹೊಸ ವೈರಸ್ ಯಾವುದು, ಭಾರತದಲ್ಲಿ ಇದುವರೆಗೆ ಎಷ್ಟು ಕೇಸ್ ದಾಖಲಾಗಿದೆ ಇಲ್ಲಿದೆ ವಿವರ.

ನಾಲ್ಕು ವರ್ಷಗಳ ಹಿಂದೆ ಭಾರತಕ್ಕೆ ಕಾಲಿಟ್ಟಿದ್ದ ಕೊವಿಡ್ ವೈರಸ್ ಯಾರೂ ಮರೆಯುವಂತಿಲ್ಲ. ಎಷ್ಟೋ ಜನರ ಜೀವನ-ಜೀವ ಕಳೆಯುವಂತೆ ಮಾಡಿದ ಕೊರೋನಾ ಈಗ ಮತ್ತೆ ವಕ್ಕರಿಸಿದೆ. ಅದು ಭಾರತಕ್ಕೂ ಕಾಲಿಟ್ಟಿದೆ.

ಸಿಂಗಾಪುರ, ಹಾಂಗ್ ಕಾಂಗ್, ಥೈಲ್ಯಾಂಡ್ ನಂತಹ ರಾಷ್ಟ್ರಗಳಲ್ಲಿ ಕಾಣಿಸಿಕೊಂಡ ಕೊರೋನಾ ಈಗ ಭಾರತಕ್ಕೂ ಕಾಲಿಟ್ಟಿದೆ. ಮೊನ್ನೆಯಷ್ಟೇ ಕ್ರಿಕೆಟಿಗ ಟ್ರಾವಿಸ್ ಹೆಡ್ ಗೆ ಕೊರೋನಾ ಪಾಸಿಟಿವ್ ಆಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈಗಾಗಲೇ ಭಾರತದಲ್ಲಿ 257 ಸಕ್ರಿಯ ಕೇಸ್ ಗಳು ವರದಿಯಾಗಿದೆ.

ಕರ್ನಾಟಕದಲ್ಲಿ 8, ಕೇರಳದಲ್ಲಿ 69, ಮಹಾರಾಷ್ಟ್ರದಲ್ಲಿ 44, ತಮಿಳುನಾಡಿನಲ್ಲಿ 34, ಗುಜರಾತ್ 6, ದೆಹಲಿಯಲ್ಲಿ 3 ಕೇಸ್ ಗಳು ಪತ್ತೆಯಾಗಿದೆ. ಈಗ ಬಂದಿರುವ ಹೊಸ ತಳಿಯ ಹೆಸರು ಒಮಿಕ್ರಾನ್ ನ ಉಪ ತಳಿಯೆಂದು ಗುರುತಿಸಲಾಗಿದೆ. ಈಗ ವರದಿಯಾಗಿರುವ ಹೊಸ ತಳಿಯಲ್ಲಿ ಸಣ್ಣ ಮಟ್ಟಿನ ಲಕ್ಷಣ ಕಂಡುಬರುತ್ತಿದೆ. ಹಾಗಂತ ನಿರ್ಲ್ಯಕ್ಷ್ಯ ಬೇಡ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈಗಿನ ಶೈತ್ಯ ಹವಾಗುಣದಲ್ಲಿ ಈ ರೋಗ ಹೆಚ್ಚು ಹರಡುವ ಅಪಾಯವಿದೆ. ಹೀಗಾಗಿ ಎಚ್ಚರಿಕೆಯಿಂದಿರುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ರಾಜಣ್ಣ ಚುನಾವಣಾ ರಾಜಕಾರಣಕ್ಕೆ ಗುಡ್‌ಬೈ, ಕಾರಣವೇನು ಗೊತ್ತಾ