Select Your Language

Notifications

webdunia
webdunia
webdunia
webdunia

ಮಹಿಳೆಯರು ಪದೇ ಪದೇ ಕೂದಲು ಸರಿ ಮಾಡ್ಕೋಬೇಡಿ ಎಂದ ಕೋರ್ಟ್

ಮಹಿಳೆಯರು ಪದೇ ಪದೇ ಕೂದಲು ಸರಿ ಮಾಡ್ಕೋಬೇಡಿ ಎಂದ ಕೋರ್ಟ್
ನವದೆಹಲಿ , ಮಂಗಳವಾರ, 25 ಅಕ್ಟೋಬರ್ 2022 (08:54 IST)
ಮುಂಬೈ : ಮಹಿಳಾ ವಕೀಲರು ಮುಕ್ತ ನ್ಯಾಯಾಲಯದಲ್ಲಿ ತಮ್ಮ ತಲೆಗೂದಲನ್ನು ಪದೇಪದೆ ಸರಿಪಡಿಸಿಕೊಳ್ಳದಿರಿ.

ಇದರಿಂದ ನ್ಯಾಯಾಲಯದ ಕಲಾಪಕ್ಕೆ ತೊಂದರೆಯಾಗುತ್ತದೆ ಎಂಬ ವಿಲಕ್ಷಣ ಪ್ರಕಟಣೆಯೊಂದನ್ನು ಪುಣೆ ಜಿಲ್ಲಾ ನ್ಯಾಯಾಲಯ ಹೊರಡಿಸಿತ್ತು.

ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ವಿವಾದಾತ್ಮಕ ಪ್ರಕಟಣೆಯನ್ನು ಹಿಂಪಡೆದಿದೆ. ಮಹಿಳಾ ವಕೀಲರು ಓಪನ್ ಕೋರ್ಟ್ನಲ್ಲಿ ಪದೇಪದೆ ತಮ್ಮ ತಲೆಗೂದಲು ಸರಿಪಡಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ.

ಇದು ನ್ಯಾಯಾಲಯದ ಕಾರ್ಯನಿರ್ವಹಣೆಗೆ ತೊಂದರೆ ಉಂಟುಮಾಡುತ್ತಿದೆ. ಆದ್ದರಿಂದ ಹಾಗೆ ಮಾಡದಿರಲು ಮಹಿಳಾ ವಕೀಲರಿಗೆ ಈ ಮೂಲಕ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿತ್ತು. 

ನ್ಯಾಯಾಲಯದ ಸೌಹಾರ್ದತೆಯನ್ನು ಕಾಪಾಡಲು ಮಾತ್ರ ನೋಟಿಸ್ ನೀಡಲಾಗಿದೆಯೇ ಹೊರತು ಯಾರನ್ನೂ ನೋಯಿಸಲು ಮಾಡಿಲ್ಲ. ಕೆಲವರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ನೋಟಿಸ್ ಹಿಂಪಡೆದಿರುವುದಾಗಿ ಎಂದು ಕೋರ್ಟ್ ಹೇಳಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಗಳ ಸಾವಿನ ಸುತ್ತ ಅನುಮಾನ! 3 ಪುಟಗಳ ಡೆತ್ನೋಟ್ ರಹಸ್ಯ ಬಯಲು!