ನ್ಯೂಜಿಲೆಂಡ್ - ಟೋಡ್ ಮತ್ತು ಪ್ಯಾಟ್ರೀಷಿಯಾ ಎಂಬ ಅಮೆರಿಕ ಮೂಲದ ದಂಪತಿಗಳು ನಾಲ್ಕು ತಿಂಗಳ ಕಾಲ ನ್ಯೂಜಿಲೆಂಡ್ ಪ್ರವಾಸಕ್ಕೆ ಯೋಜನೆ ರೂಪಿಸಿದ್ದು, ಮುಂಗಡ ವಿಮಾನದ ಟಿಕೆಟ್ ಸಹ ಬುಕ್ ಮಾಡಿದ್ದರು. ಬಳಿಕ ವೈದ್ಯಕೀಯ ಪರೀಕ್ಷೆಯಲ್ಲಿ ಪ್ಯಾಟ್ರಿಷಿಯಾಗೆ ಗಾಲ್ ಬ್ಲಾಡರ್ ಕ್ಯಾನ್ಸರ್ ಆಗಿರುವುದು ಖಚಿತವಾಗಿತ್ತು. ಅವರು ಕೇವಲ ನಾಲ್ಕು ತಿಂಗಳಷ್ಟೇ ಬದುಕುವುದಾಗಿ ವೈದ್ಯರು ಹೇಳಿದ್ದರು. ಇದರಿಂದ ದಂಪತಿಗಳು ತಮ್ಮ ಪ್ರವಾಸವನ್ನು ರದ್ದುಪಡಿಸಿದ್ದರು.
ಪತ್ನಿಗೆ ಕ್ಯಾನ್ಸರ್ ಖಾಯಿಲೆ ಖಚಿತವಾದ ಕಾರಣ ವಿಮಾನಯಾನ ರದ್ದುಪಡಿಸಿದ ದಂಪತಿಗೆ ನ್ಯೂಜಿಲೆಂಡ್ ವಿಮಾನಯಾನ ಸಂಸ್ಥೆ ಬರೋಬ್ಬರಿ 6.5 ಲಕ್ಷ ರೂ ದಂಡ ವಿಧಿಸಿದೆ.ವಿಮಾನಯಾನ ರದ್ದತಿಗೆ 37500 ನ್ಯೂಜಿಲೆಂಡ್ ಡಾಲರ್ ದಂಡ ವಿಧಿಸಿದರುವ ನ್ಯೂಜಿಲೆಂಡ್ ವಿಮಾನಯಾನ ಸಂಸ್ಥೆ ದಂಪತಿಗಳಿಗೆ ಶಾಕ್ ನೀಡಿದೆ.ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ವೈರಲ್ ಆಗುತ್ತಿದ್ದಂತೆಯೇ ಏರ್ ನ್ಯೂಜಿಲೆಂಡ್ ಎಚ್ಚೆತ್ತುಕೊಂಡಿದ್ದು, ದಂಪತಿಗಳ ಕ್ಷಮೆ ಯಾಚಿಸಿದೆ.