Select Your Language

Notifications

webdunia
webdunia
webdunia
webdunia

ಕರ್ಕಟಕ ರಾಶಿಯವರಿಗೆ ಅದೃಷ್ಟದ ಬಣ್ಣ ಮತ್ತು ಸಂಖ್ಯೆ

Astrology

Krishnaveni K

ಬೆಂಗಳೂರು , ಸೋಮವಾರ, 12 ಫೆಬ್ರವರಿ 2024 (09:21 IST)
ಬೆಂಗಳೂರು: ಕರ್ಕಟಕ ರಾಶಿ ಎಂದರೆ ಚಿತ್ರವೇ ಹೇಳುವಂತೆ ಚೇಳನ್ನು ಪ್ರತಿನಿಧಿಸುತ್ತದೆ. ಈ ರಾಶಿಯವರ ಅದೃಷ್ಟದ ಬಣ್ಣ ಮತ್ತು ಸಂಖ್ಯೆ  ಯಾವುದು ಎಂದು  ಇಂದು ನೋಡೋಣ.

ಕರ್ಕಟಕ ರಾಶಿಯವರ ಗುಣ ಸ್ವಭಾವಗಳು
ಕರ್ಕಟಕ ರಾಶಿವಯರು ಗಟ್ಟಿಗರು. ಭಾವನಾತ್ಮಕ ನೋವಾಗಲಿ, ದೈಹಿಕ ನೋವಾಗಲಿ ಅದನ್ನು ಸರಿದೂಗಿಸಿಕೊಂಡು ಹೋಗುವ ಸಾಮರ್ಥ್ಯವುಳ್ಳವರು. ತಮ್ಮ ಆಪ್ತರಿಗೆ ರಕ್ಷಣಾತ್ಮಕವಾಗಿ ನಿಲ್ಲುವ ಸ್ವಭಾವದವರು. ಆದರೆ ಸಂಶಯಪಡುವ ಸ್ವಭಾವ ಇವರ ಕೆಟ್ಟಗುಣವಾಗಬಹುದು. ಹೊರಗಿನಿಂದ ಒರಟರಂತೆ ಕಂಡರೂ ಒಳಗೆ ಮೃದು ಸ್ವಭಾವದವರಾಗಿರುತ್ತಾರೆ. ಸೃಜನ ಶೀಲತೆ ಮತ್ತು ಕಲಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ಆದರೆ ಮೂಡಿ ಸ್ವಭಾವದವರು. ಹೀಗಾಗಿ ಇವರ ಮನಸ್ಥಿತಿ ಕೆಲವೊಮ್ಮೆ ಬದಲಾಗುತ್ತಿರುತ್ತದೆ. ಈಗ ಇದ್ದ ಹಾಗೆ ಇನ್ನೊಮ್ಮೆ ಇವರ ಭಾವನೆ ಇರುವುದಿಲ್ಲ. ಹೀಗಾಗಿ ಅರ್ಥ ಮಾಡಿಕೊಳ್ಳಲು ಕಷ್ಟ ಎನಿಸಬಹುದು. ಒಮ್ಮೆ ಇವರಿಗೆ ಧ‍್ವೇಷ ಬಂತೆಂದರೆ ಅಜೀವ ಪರ್ಯಂತ ಧ್ವೇಷ ಸಾಧಿಸುವ ಸ್ವಭಾವದವರು. ತಮಗಾದ ನೋವನ್ನು ಬೇಗನೇ ಮರೆಯುವವರಲ್ಲ.

ಕರ್ಕಟಕ ರಾಶಿಯ ಅದೃಷ್ಟ ಸಂಖ್ಯೆ ಮತ್ತು ಬಣ್ಣ
ಕರ್ಕಟಕ ರಾಶಿಯವರ ಅದೃಷ್ಟದ ಸಂಖ್ಯೆಯೆಂದರೆ 7. ಈ ಸಂಖ್ಯೆಯನ್ನು ಒಳಗೊಂಡಂತೆ ಏನೇ ಕೆಲಸಕ್ಕೆ ಕೈ ಹಾಕಿದರೂ ಅವರಿಗೆ ಯಶಸ್ಸು ಸಿಗುತ್ತದೆ. ಅದೇ ರೀತಿ ಅದೃಷ್ಟದ ಬಣ್ಣವೆಂದರೆ ಮೆಜೆಂಟಾ. ಮಂಗಳವಾರ, ಶುಕ್ರವಾರ, ಗುರುವಾರ, ಭಾನುವಾರ ಇವರಿಗೆ ಶುಭಪ್ರದ ದಿನವಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?