Publish Date: Wed, 18 Mar 2020 (10:10 IST)Updated Date: Wed, 18 Mar 2020 (10:11 IST)
ನವದೆಹಲಿ : ಕೊರೊನಾ ಸೋಂಕು ತಗಲಿರುವ ಹಿನ್ನಲೆಯಲ್ಲಿ ರೈಲ್ವೆ ಮಾಜಿ ಸಚಿವ, ಬಿಜೆಪಿ ಸಂಸದ ಸುರೇಶ್ ಪ್ರಭುಗೆ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾರ್ಚ್ 10ರಂದು ಸೌದಿ ಅರೇಬಿಯಾಗೆ ಭೇಟಿ ನೀಡಿದ್ದ ಬಿಜೆಪಿ ಸಂಸದ ಸುರೇಶ್ ಪ್ರಭುಗೆ ಕೊರೊನಾ ಸೋಂಕು ತಗಲಿರುವ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ದೆಹಲಿ ನಿವಾಸದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 14 ದಿನಗಳ ಕಾಲ ಸುರೇಶ್ ಪ್ರಭು ಮೇಲೆ ನಿಗಾ ಇಡಲಾಗಿದೆ ಎನ್ನಲಾಗಿದೆ.