ತಿರುವನಂತಪುರಂ: ಇಂದು ಭಾರತದ ಪಾಲಿಗೆ ಎರಡು ಮಹತ್ವದ ಘಟನೆಗಳಾಗಲಿವೆ. ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮತ್ತು ಟಿ20 ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಮಹತ್ವದ ಪಂದ್ಯ ನಡೆಯಲಿದೆ.
ಎರಡೂ ಘಟನೆಗಳೂ ಸಂಜೆಯೇ ನಡೆಯುತ್ತಿದೆ. ಹೀಗಾಗಿ ಇಂದು ಭಾನುವಾರದ ವೀಕೆಂಡ್ ಎಲ್ಲರೂ ಟಿವಿ ಮುಂದೆ ಕೂರಬಹುದು. ಆದರೆ ಕಾಂಗ್ರೆಸ್ ನಾಯಕ, ತಿರುವನಂತಪುರಂ ಸಂಸದ ಶಶಿ ತರೂರ್ ನನಗೆ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನೋಡಲು ಆಸಕ್ತಿಯಿಲ್ಲ. ಅದರ ಬದಲು ಭಾರತ, ಪಾಕಿಸ್ತಾನ ಮ್ಯಾಚ್ ನೋಡುವುದಾಗಿ ಹೇಳಿದ್ದಾರೆ.
ಎಲ್ಲರಿಗೂ ಗೊತ್ತಿರುವ ಹಾಗೆ, ಶಶಿ ತರೂರ್ ಅಪ್ಪಟ ಕ್ರಿಕೆಟ್ ಪ್ರೇಮಿ. ಆದರೆ ಕಾಂಗ್ರೆಸ್ ಸಂಸದ ಕೂಡಾ. ಹೀಗಾಗಿ ವಿರೋಧ ಪಕ್ಷದ ಸಂಸದನಾದ ಶಶಿ ತರೂರ್ ಗೆ ಮೋದಿ ಪ್ರಮಾಣ ವಚನ ಸ್ವಿಕರಿಸುವ ಗಳಿಗೆ ನೋಡುವ ಧಾವಂತವಿಲ್ಲ. ಹೀಗಾಗಿ ಮ್ಯಾಚ್ ನೋಡುವುದಾಗಿ ಹೇಳಿದ್ದಾರೆ.