Select Your Language

Notifications

webdunia
webdunia
webdunia
webdunia

ಬಿಜೆಪಿ ಶಾಸಕನ ನಾಲಿಗೆ ಕತ್ತರಿಸಿದರೆ 5 ಲಕ್ಷ ಬಹುಮಾನ ಕೊಡುತ್ತೇನೆ ಎಂದ ಕಾಂಗ್ರೆಸ್ ನಾಯಕ

ಶಾಸಕ ರಾಮ್ ಕದಮ್
ಮುಂಬೈ , ಶುಕ್ರವಾರ, 7 ಸೆಪ್ಟಂಬರ್ 2018 (10:07 IST)
ಮುಂಬೈ: ಹುಡುಗ ಇಷ್ಟಪಟ್ಟರೆ, ಆತ ಪ್ರೀತಿಸುವ ಹುಡುಗಿಯನ್ನು ಅಪಹರಿಸಿಯಾದರೂ ಮದುವೆ ಮಾಡಿಸುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಬಿಜೆಪಿ ಶಾಸಕ ರಾಮ್ ಕದಮ್ ನಾಲಿಗೆ ಕತ್ತರಿಸಿದವರಿಗೆ 5 ಲಕ್ಷ ರೂ. ಬಹುಮಾನ ಕೊಡುವುದಾಗಿ ಕಾಂಗ್ರೆಸ್ ನಾಯಕ ಸುಬೋಧ್ ಸಾವ್ಜಿ ಘೋಷಿಸಿದ್ದಾರೆ.

ಬಿಜೆಪಿ ಶಾಸಕನ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿತ್ತು. ಅಷ್ಟೇ ಅಲ್ಲದೆ, ಶಾಸಕರ ವಿರುದ್ಧ ಮಹಿಳಾ ಆಯೋಗ ವಿವರಣೆ ಕೋರಿ ನೋಟಿಸ್ ಜಾರಿ ಮಾಡಿತ್ತು.

ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ವಿಡಿಯೋ ಸಂದೇಶ ನೀಡಿದ್ದು, ಶಾಸಕ ರಾಮ್ ಕದಮ್ ಹೇಳಿಕೆಯನ್ನು ಖಂಡಿಸುತ್ತೇನೆ. ಇಂತಹ ಹೇಳಿಕೆ ನೀಡಿದ ಶಾಸಕನ ನಾಲಿಗೆ ಕತ್ತರಿಸಿ ತಂದರೆ 5 ಲಕ್ಷ ರೂ. ಬಹುಮಾನ ನೀಡುತ್ತೇನೆ’ ಎಂದು ಮತ್ತಷ್ಟು ವಿವಾದವೆಬ್ಬಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ತಾಯಿ ಬಗ್ಗೆ ಹರಿದಾಡುತ್ತಿದೆ ಹೀಗೊಂದು ಸುಳ್ಳು ಸುದ್ದಿ