Select Your Language

Notifications

webdunia
webdunia
webdunia
webdunia

ಸರ್ಕಾರ ನೀಡಿದ ಮೇಕಪ್ ಬಾಕ್ಸ್​​​ನಲ್ಲಿ ಕಾಂಡೋಮ್, ಗರ್ಭನಿರೋಧಕ ಮಾತ್ರೆ ಪತ್ತೆ

ಸರ್ಕಾರ ನೀಡಿದ ಮೇಕಪ್ ಬಾಕ್ಸ್​​​ನಲ್ಲಿ ಕಾಂಡೋಮ್, ಗರ್ಭನಿರೋಧಕ ಮಾತ್ರೆ ಪತ್ತೆ
ಮಧ್ಯಪ್ರದೇಶ , ಬುಧವಾರ, 31 ಮೇ 2023 (08:59 IST)
ಝಬುವಾ : ಮಧ್ಯಪ್ರದೇಶದಲ್ಲಿ ಹೊಸದಾಗಿ ಜಾರಿಯಾಗಿರುವ ನಿಕಾಹ್ ಯೋಜನೆ ಅಡಿಯಲ್ಲಿ ಸರ್ಕಾರವು ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿ ಸಾಮೂಹಿಕ ವಿವಾಹ ಮಹೋತ್ಸವವನ್ನು ನಡೆಸಿತ್ತು.
 
ಪ್ರತಿ ವಧುಗಳಿಗೆ ಮೇಕಪ್ ಬಾಕ್ಸ್ಗಳನ್ನು ನೀಡಲಾಗಿತ್ತು. ಆದರೆ ಅದರಲ್ಲಿ ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳನ್ನು ಇಡಲಾಗಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮುಖ್ಯಮಂತ್ರಿ ಕನ್ಯಾ ವಿವಾಹ/ನಿಕಾಹ್ ಯೋಜನೆ ಅಡಿಯಲ್ಲಿ, ಹಿಂದುಳಿದ ಸಮುದಾಯಗಳ ಮಹಿಳೆಯರಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ಸೋಮವಾರ (ಮೇ29)ದಂದು 296 ಜೋಡಿಗಳಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾಮೂಹಿಕ ಕಾರ್ಯಕ್ರಮದ ಸಂದರ್ಭದಲ್ಲಿ, ನವವಿವಾಹಿತರಿಗೆ ವಿತರಿಸಲಾದ ಮೇಕ್ಅಪ್ ಬಾಕ್ಸ್ಗಳಲ್ಲಿ ಉಚಿತ ಕಾಂಡೋಮ್ಗಳು ಮತ್ತು ಗರ್ಭನಿರೋಧಕ ಮಾತ್ರೆಗಳನ್ನು ಇಡಲಾಯಿತು. ಹಿರಿಯ ಜಿಲ್ಲಾ ಅಧಿಕಾರಿ ಭೂರಸಿಂಗ್ ರಾವತ್ ಅವರು ತಮ್ಮ ಇಲಾಖೆಯಿಂದ ಈ ವಿತರಣೆ ನಡೆದಿಲ್ಲ, ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ರಾವತ್ ಹೇಳಿದ್ದಾರೆ.

ಕುಟುಂಬ ಯೋಜನೆ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಕಾಂಡೋಮ್ಗಳು ಮತ್ತು ಇತರ ಗರ್ಭನಿರೋಧಕಗಳನ್ನು ಸರಬರಾಜು ಮಾಡಿರುವ ಸಾಧ್ಯತೆಗಳು ಇದೆ ಎಂದು ರಾವತ್ ರಾಜ್ಯ ಆರೋಗ್ಯ ಇಲಾಖೆಯ ಮೇಲೆ ಆರೋಪ ಹೊರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರಿ ನೌಕರರಿಗೆ ಕಾಂಗ್ರೆಸ್ ಸರ್ಕಾರ ಸಿಹಿ ಸುದ್ದಿ