Select Your Language

Notifications

webdunia
webdunia
webdunia
webdunia

50,000 ರೂ.ಗೆ 17 ವರ್ಷದ ಅಪ್ರಾಪ್ತೆಯ ಮಾರಾಟ !

50,000 ರೂ.ಗೆ 17 ವರ್ಷದ ಅಪ್ರಾಪ್ತೆಯ ಮಾರಾಟ !
ಭೋಪಾಲ್ , ಮಂಗಳವಾರ, 9 ಮೇ 2023 (08:49 IST)
ಭೋಪಾಲ್ : 17 ವರ್ಷದ ಅಪ್ರಾಪ್ತೆಯನ್ನು 50 ಸಾವಿರ ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ಮೂವರು ಪುರುಷರು ಮತ್ತು ಒಬ್ಬ ಮಹಿಳೆಯನ್ನು ಪೊಲೀಸರು ಬಂಧಿಸಿದ ಘಟನೆ ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ನಡೆದಿದೆ.
 
ಅಪ್ರಾಪ್ತೆ ಮಂಡ್ಲಾ ಜಿಲ್ಲೆಯ ಘುಘ್ರಿ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದವಳಾಗಿದ್ದು, ಜಬಲ್ಪುರದ ಡೈರಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಆರೋಪಿಗಳಾದ ಪಹಲ್ವತಿ ಬಾಯಿ ಹಾಗೂ ಕುಶ್ವಾಹ ಎಂಬವರು ಆಕೆಯನ್ನು ಪರಿಚಯ ಮಾಡಿಕೊಂಡಿದ್ದಾರೆ. ಅಲ್ಲದೇ ಮುಂಬೈನಲ್ಲಿ ಉತ್ತಮ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಆಕೆಯನ್ನು ಪಟಾಯಿ ಗ್ರಾಮದ ವಿಷ್ಣು ಕುಶ್ವಾಹ ಎಂಬ ವ್ಯಕ್ತಿಗೆ 50 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ. 

ಈ ಮಧ್ಯೆ ಆಕೆಯ ಪೋಷಕರು ಮಗಳು ನಾಪತ್ತೆಯಾಗಿದ್ದಾಳೆ ಎಂದು ಮಾಂಡ್ಲಾ ಪೊಲೀಸರಿಗೆ ದೂರು ನೀಡಿದ್ದರು. ಮಾಂಡ್ಲಾ ಪೊಲೀಸರು ನೀಡಿದ ಮಾಹಿತಿಯ ಆಧಾರದ ಮೇರೆಗೆ ಮಾನವ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಪಟಾಯಿ ಗ್ರಾಮದಲ್ಲಿ ಬಂಧಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗೋಲ್ಡನ್ ಟೆಂಪಲ್ ಬಳಿ 2ನೇ ಬಾರಿ ಸ್ಫೋಟ!