Select Your Language

Notifications

webdunia
webdunia
webdunia
webdunia

ನನ್ನ ಮಗಳೂ ಸೇನೆ ಸೇರ್ತಾಳೆ: ಹುತಾತ್ಮ ಯೋಧ ಆಶುತೋಷ್ ಶರ್ಮಾ ಪತ್ನಿಯ ಪ್ರತಿಜ್ಞೆ

ನನ್ನ ಮಗಳೂ ಸೇನೆ ಸೇರ್ತಾಳೆ: ಹುತಾತ್ಮ ಯೋಧ ಆಶುತೋಷ್ ಶರ್ಮಾ ಪತ್ನಿಯ ಪ್ರತಿಜ್ಞೆ
ನವದೆಹಲಿ , ಬುಧವಾರ, 6 ಮೇ 2020 (09:48 IST)
ನವದೆಹಲಿ: ಹಂದ್ವಾರದಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ವೀರ ಯೋಧ ಆಶುತೋಷ್ ಶರ್ಮಾ ಪತ್ನಿ ಪಲ್ಲವಿ ಶರ್ಮಾ ತಾವೂ ಸೇನೆ ಸೇರಲು ಬಯಸುವುದಾಗಿ ಹೇಳಿಕೆ ನೀಡಿದ್ದಾರೆ.


ತಮಗೆ ವಯಸ್ಸು ಮೀರಿದ ಕಾರಣ ಬಹುಶಃ ಸೇನೆ ಸೇರಲು ಸಾಧ‍್ಯವಾಗದು. ಒಂದು ವೇಳೆ ಸರ್ಕಾರ ಅನುಮತಿ ನೀಡಿದರೆ ಸೇನೆ ಸೇರಲು ಹಿಂಜರಿಯುವುದಿಲ್ಲ. ಹೀಗಾಗಿ ನನಗೆ ಸಾಧ‍್ಯವಾಗದಿದ್ದರೆ ನನ್ನ ಮಗಳನ್ನಾದರೂ ಮುಂದೆ ಸೇನೆಗೆ ಸೇರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಪಲ್ಲವಿ ಶರ್ಮಾ.

ಮೊನ್ನೆ ಉಗ್ರರ ಜತೆ ನಡೆದ ಗುಂಡಿನ ಕಾಳಗದಲ್ಲಿ ಮೃತಪಟ್ಟ ವೀರ ಯೋಧರ ಪೈಕಿ ಆಶುತೋಷ್ ಕೂಡಾ ಒಬ್ಬರಾಗಿದ್ದರು. ಪತಿಯ ಸಾವಿನಿಂದ ಧೃತಿಗೆಡದ ಪಲ್ಲವಿ ಶರ್ಮಾ ಇಂತಹದ್ದೊಂದು ವೀರ ಹೇಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಜಿಲ್ಲೆಯಲ್ಲಿ ಡೆಡ್ಲಿ ಕೊರೊನಾಕ್ಕೆ ಮತ್ತೊಂದು ಬಲಿ