Select Your Language

Notifications

webdunia
webdunia
webdunia
webdunia

ಚುನಾವಣಾ ದಿನಾಂಕ ಪ್ರಕಟ ಬೆನ್ನಲ್ಲೇ ನೀತಿ ಸಂಹಿತೆ ಜಾರಿ: ನಾಳೆಯಿಂದ ಏನೆಲ್ಲಾ ಬದಲಾವಣೆಯಾಗಲಿದೆ ಗೊತ್ತಾ

Election Commission Of India

Sampriya

ನವದೆಹಲಿ , ಶುಕ್ರವಾರ, 15 ಮಾರ್ಚ್ 2024 (18:23 IST)
ನವದೆಹಲಿ:  2024ರ ಲೋಕಸಭೆ ಚುನಾವಣೆಯ ದಿನಾಂಕವನ್ನು ನಾಳೆ ಮಧ್ಯಾಹ್ನ 3 ಗಂಟೆಗೆ ಪ್ರಕಟಿಸುವುದಾಗಿ ಭಾರತೀಯ ಚುನಾವಣಾ ಆಯೋಗ ಹೇಳಿದೆ. ಇನ್ನೂ ಚುನಾವಣಾ ದಿನಾಂಕ ಘೋಷಣೆಯಾದ ನಂತರ ಫಲಿತಾಂಶ ಪ್ರಕಟವಾಗುವವರೆಗೆ ದೇಶದಾದ್ಯಂತ ಚುನಾವಣಾ ನೀತಿ ಸಂಹಿತಿ ಜಾರಿಯಾಗುತ್ತದೆ. ಇದು ಸರ್ಕಾರದ ಸಾಮಾನ್ಯ ಕಾರ್ಯಚಟುವಟಿಕೆಗಳಲ್ಲಿ ಬದಲಾವಣೆ ತರಲಿದೆ. ಅದಲ್ಲದೆ ಇದು ಸರ್ಕಾರ ನಡೆಸುವ ಪಕ್ಷ ಹಾಗೂ ಚುನಾವಣಾ ಕಣಕ್ಕಿಳಿಯುವ ಸ್ಪರ್ಧಿಗಳ ಕಾರ್ಯ ಚಟುವಟಿಕೆಗಳಲ್ಲಿ ಬದಲಾವಣೆ ತರುತ್ತದೆ.  ನೀತಿ ಸಂಹಿತೆ ಜಾರಿಯಾದ ಮೇಲೆ ಏನೆಲ್ಲ ಬದಲಾಗಲಿದೆ ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.
 
* ಚುನಾವಣೆ ದಿನಾಂಕ ಪ್ರಕಟವಾದ ಬಳಿಕ ಮಂತ್ರಿಗ

 
ಳು ಮತ್ತು ಇತರ ಅಧಿಕಾರಿಗಳು ಯಾವುದೇ ಹಣಕಾಸಿನ ಅನುದಾನವನ್ನು ಘೋಷಿಸುವಂತಿಲ್ಲ. 
 
* ಹೊಸ ಯೋಜನೆಗೆ ಅಡಿಗಲ್ಲು ಹಾಕುವುದು ಅಥವಾ ಪ್ರಾರಂಭಿಸುವುದಕ್ಕೆ ಅನುಮತಿಯಿಲ್ಲ.
 
* ನೀತಿ ಸಂಹಿತೆ ಜಾರಿ ವೇಳೆ ರಸ್ತೆಗಳ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸುವುವಂತಿಲ್ಲ.
 
* ಆಡಳಿತ ಪಕ್ಷದ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಸರ್ಕಾರಿ ಅಥವಾ ಸಾರ್ವಜನಿಕ ಉದ್ಯಮಗಳಲ್ಲಿ ತಾತ್ಕಾಲಿಕ ನೇಮಕಾತಿಗಳನ್ನು ನಿಷೇಧಿಸಲಾಗಿದೆ.
 
* ಲೋಕಸಭೆಯ ಚುನಾವಣಾ ವೇಳಾಪಟ್ಟಿ ಪ್ರಕಟವಾದ ನಂತರ ಜಿಲ್ಲಾವಾರು ಅನುದಾನವನ್ನು ಹಾಗೂ ಪಾವತಿಗಳನ್ನು ಮಂಜೂರು ಮಾಡಲಾಗುವುದಿಲ್ಲ.
 
* ಸರ್ಕಾರಿ ಸಂಪನ್ಮೂಲಗಳ ಬಳಕೆ: ಚುನಾವಣಾ ಪ್ರಚಾರಕ್ಕೆ ಸರ್ಕಾರಿ ಯಂತ್ರೋಪಕರಣ ಹಾಗೂ ಸರ್ಕಾರಿ ಸಿಬ್ಬಂದಿಗಳನ್ನು ಬಳಸಿಕೊಳ್ಳುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
 
*ಚುನಾವಣಾ ಸಮಯದಲ್ಲಿ ಆಡಳಿತ ಪಕ್ಷದ ಹಿತಾಸಕ್ತಿಗಳನ್ನು ಹೆಚ್ಚಿಸಲು ಅಧಿಕೃತ ವಿಮಾನಗಳು, ವಾಹನಗಳು, ಯಂತ್ರೋಪಕರಣಗಳು ಮತ್ತು ಸಿಬ್ಬಂದಿ ಸೇರಿದಂತೆ ಸರ್ಕಾರಿ ಸಾರಿಗೆಯನ್ನು ಬಳಸುವಂತಿಲ್ಲ. 
 
*ಚುನಾವಣಾ ಸಭೆಗಳನ್ನು ನಡೆಸಲು ಎಲ್ಲ ಪಕ್ಷಗಳು ಮತ್ತು ಅಭ್ಯರ್ಥಿಗಳು ಒಂದೇ ನಿಯಮಗಳನ್ನು ಅನುಸರಿಸಬೇಕು. 
 
ವಸತಿ ಮತ್ತು ಪ್ರಚಾರ: ವಿಶ್ರಾಂತಿ ಗೃಹಗಳು, ಡಕ್ ಬಂಗಲೆಗಳು ಅಥವಾ ಇತರ ಸರ್ಕಾರಿ ವಸತಿಗಳನ್ನು ಆಡಳಿತ ಪಕ್ಷ ಅಥವಾ ಅದರ ಅಭ್ಯರ್ಥಿಗಳು ಏಕಸ್ವಾಮ್ಯಗೊಳಿಸಬಾರದೆಂದು ಚುನಾವಣಾ ಆಯೋಗ ಹೇಳುತ್ತದೆ. ಆದರೆ ಯಾವುದೇ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ಅವುಗಳನ್ನು ಪ್ರಚಾರ ಕಚೇರಿಗಳಾಗಿ ಬಳಸುವುದನ್ನು ಅಥವಾ ಸಾರ್ವಜನಿಕ ಸಭೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. 
 
ಸರ್ಕಾರಿ ಹಣದಲ್ಲಿ ಪ್ರಚಾರಕ್ಕೆ ಮಾಧ್ಯಮಕ್ಕೆ ಹಣ ನೀಡುವಂತಿಲ್ಲ: ಸರ್ಕಾರಿ ಹಣದಲ್ಲಿ ಪ್ರಚಾರಕ್ಕಾಗಿ ಮಾಧ್ಯಮಗಳಿಗೆ ಹಣ ನೀಡುವಂತಿಲ್ಲ. ರಾಜಕೀಯ ಸುದ್ದಿಗಳ ಪಕ್ಷಪಾತದ ಪ್ರಸಾರಕ್ಕಾಗಿ ಅಧಿಕೃತ ಸಮೂಹ ಮಾಧ್ಯಮಗಳ ದುರುಪಯೋಗ ಮತ್ತು ಆಡಳಿತ ಪಕ್ಷದ ಪರವಾಗಿ ಸಾಧನೆಗಳ ಬಗ್ಗೆ ಪ್ರಚಾರವನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು ಎಂದು ಮಾರ್ಗಸೂಚಿಯಲ್ಲಿದೆ. 
 
ನೀತಿ ಸಂಹಿತಿ ಉಲ್ಲಂಘಿಸಿದರೆ ಏನು ಶಿಕ್ಷೆ:
 
ಭಾರತೀಯ ದಂಡ ಸಂಹಿತೆ ಸೆಕ್ಷನ್ 171 E ಮತ್ತು 717 I ಅಡಿಯಲ್ಲಿ ಎಫ್‌ಐಆರ್‌ ದಾಖಲಾಗುತ್ತದೆ. ಆರೋಪ ಸಾಬೀತಾದಲ್ಲಿ 3 ವರ್ಷಗಳ ಜೈಲು ಶಿಕ್ಷೆ ಅನುಭವಿಸುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿ.ಕೆ.ಸುರೇಶ್ ಹೇಳಿಕೆಗೆ ಡೈರೆಕ್ಟ್‌ ಟಾಂಗ್ ಕೊಟ್ಟು ಫೀಲ್ಡ್‌ಗಿಳಿದ ಡಾ.ಮಂಜುನಾಥ್