Publish Date: Fri, 15 Mar 2024 (15:07 IST)
Updated Date: Fri, 15 Mar 2024 (16:20 IST)
ಅಹ್ಮದಾಬಾದ್: ಮುಂಬರುವ ಲೋಕಸಭೆ ಚುನಾವಣೆಗೆ ಗಾಂಧಿನಗರ ಕ್ಷೇತ್ರದಿಂದ ಮತ್ತೇ ಟಿಕೆಟ್ ಪಡೆದಿರುವ ಕೇಂದ್ರ ಸಚಿವ ಅಮಿತ್ ಶಾ ಇಂದು ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿಯ ಚುನಾವಣಾ ಚಾಣಕ್ಷ್ಯ ಶಾ ಅವರು, ಈ ಚುನಾವಣೆ ಬಿಜೆಪಿ ಪಕ್ಷಕ್ಕಾಗಿ ಅಲ್ಲ, ಭಾರತಕ್ಕಾಗಿ ಎಂದು ಬಿಜೆಪಿ ಕಾರ್ಯಕರ್ತರ ಬಳಿ ಕೇಳಿಕೊಂಡರು.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಶಾ ಅವರು ಗುರುಕುಲ ರಸ್ತೆಯಲ್ಲಿರುವ ದೇವಸ್ಥಾನಕ್ಕೆ ಭೇಟಿ ಕೊಟ್ಟ ದೇವರ ಆಶೀರ್ವಾದ ಪಡೆದರು. ನಂತರ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಮತದಾರರಲ್ಲಿ ಮನವಿ ಮಾಡಿದ ಅಮಿತ್ ಶಾ ಅವರು, ಮತದಾನದಂದು ಕಮಲದ ಚಿಹ್ನೆಗೆ ಬಟನ್ ಒತ್ತುವುದನ್ನು ಮರೆಯಬೇಡಿ ಎಂದರು.