Publish Date: Fri, 24 Jan 2020 (06:37 IST)
Updated Date: Fri, 24 Jan 2020 (06:39 IST)
ಪಾಟ್ನಾ : ಬಿಜೆಪಿಯೊಂದಿಗೆ ಜೆಡಿಯು ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಸಿಎಂ ನಿತೀನ್ ಕುಮಾರ್ ಅವರು ಹಿಂದೇಟು ಹಾಕುತ್ತಿದ್ದಾರೆ ಎಂದ ಜೆಡಿಯು ಹಿರಿಯ ನಾಯಕ ಪವನ್ ವರ್ಮಾ ಅವರ ಹೇಳಿಕೆಗೆ ಸಿಎಂ ನಿತೀಶ್ ಕುಮಾರ್ ಖಾರವಾಗಿ ತಿರುಗೇಟು ನೀಡಿದ್ದಾರೆ.
ಮುಂಬುರುವ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಹಾಗೂ ಸಿಎಎ ವಿಚಾರವಾಗಿ ಸಿಎಂ ನಿತೀಶ್ ಕುಮಾರ್ ಅವರು ಹಿಂದೇಟು ಹಾಕುತ್ತಿದ್ದಾರೆ ಎಂದ ಜೆಡಿಯು ಹಿರಿಯ ನಾಯಕ ಪವನ್ ವರ್ಮಾ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ಇದಕ್ಕೆ ಕಿಡಿಕಾರಿದ ಸಿಎಂ ನಿತೀಶ್ ಕುಮಾರ್, ಪಕ್ಷದ ವಿಚಾರಗಳ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುವುದು ಸರಿಯಲ್ಲ. ಅವರಿಗೆ ನನ್ನ ಮೇಲೆ ಗೌರವವಿಲ್ಲದಿದ್ದರೂ ನನಗೆ ಅವರ ಮೇಲೆ ಗೌರವವಿದೆ. ಅವರಿಗೆ ಪಕ್ಷಾಂತರ ಮಾಡುವ ಮನಸ್ಸಿದ್ದರೆ ಅವರು ಅದನ್ನು ಮಾಡಬಹುದು ಎಂದು ಖಾರವಾಗಿ ಹೇಳಿದ್ದಾರೆ.