Publish Date: Fri, 13 Oct 2017 (09:00 IST)
Updated Date: Fri, 13 Oct 2017 (09:02 IST)
ನವದೆಹಲಿ: ಸಚಿವಾಲಯದ ಹೊರಗೆ ಪಾರ್ಕ್ ಮಾಡಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಸೇರಿದ ನೀಲಿ ಬಣ್ಣದ ವೇಗನಾರ್ ಕಾರು ಕಳ್ಳತನವಾಗಿದೆ.
ಕೇಜ್ರಿವಾಲ್ ರಾಜಕೀಯ ಜೀವನದ ಆರಂಭಿಕ ದಿನಗಳಲ್ಲಿ ಈ ಕಾರನ್ನು ಬಳಸುತ್ತಿದ್ದರು. ಇದನ್ನು ಆಮ್ ಆದ್ಮಿ ಪಕ್ಷದ ಬೆಂಬಲಿಗರೊಬ್ಬರು ಕೇಜ್ರಿವಾಲ್ ಗೆ ಉಡುಗೊರೆಯಾಗಿ ನೀಡಿದ್ದರು.
ಸದ್ಯ ಬ್ರಿಟನ್ ನಲ್ಲಿ ನೆಲೆಸಿರುವ ಕುಂದನ್ ಶರ್ಮಾ ಎನ್ನುವ ಬೆಂಬಲಿಗ ಈ ಕಾರು ಮತ್ತು ಒಂದು ಬೈಕ್ ಜತೆಗೆ ಸ್ವಲ್ಪ ಹಣವನ್ನೂ ಎಎಪಿ ಪಕ್ಷಕ್ಕೆ ದಾನ ಮಾಡಿದ್ದರು. ಆದರೆ 2015 ರಲ್ಲಿ ಎಎಪಿ ಬಗ್ಗೆ ನಿರಾಶೆಗೊಂಡು ತಾವು ಉಡುಗೊರೆಯಾಗಿ ಇತ್ತ ಕಾರನ್ನು ಮರಳಿಸುವಂತೆ ಕುಂದನ್ ಒತ್ತಾಯಿಸಿದ್ದರು. ಇದೀಗ ಅದೇ ಕಾರು ಕಳುವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ