Publish Date: Mon, 22 May 2017 (13:19 IST)
Updated Date: Mon, 22 May 2017 (13:22 IST)
ನವದೆಹಲಿ: ದೆಹಲಿ ಸಿಎಂ ಕೇಜ್ರಿವಾಲ್ ವಿರುದ್ಧ ಡೆಲ್ಲಿ ಕ್ರಿಕೆಟ್ ಅಸೋಸಿಯೇಷನ್ ಹಗರಣದ ಸಂದರ್ಭ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಮಾನನಷ್ಟ ಮೊಕದ್ದಮೆ ಹೂಡಿರುವ ಪ್ರಕರಣ ವಿಚಾರಣೆಯ ಹಂತದಲ್ಲಿರುವಾಗಲೇ ಮತ್ತೊಮ್ಮೆ ಜೇಟ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಮೊದಲಿನ ಮಾನನಷ್ಟ ಮೊಕದ್ದಮೆ ವಿಚಾರಣೆ ನಡೆಯುತ್ತಿರುವಾಗ ಕೇಜ್ರಿವಾಲ್ ಪರ ವಕೀಲ ರಾಮ್ ಜೇಠ್ಮಲಾನಿ ಅರುಣ್ ಜೇಟ್ಲಿ ವಿರುದ್ಧ ಮೋಸಗಾರ ಎಂಬ ಪದ ಪ್ರಯೋಗ ಮಾಡಿದ್ದರು. ಇದರ ವಿರುದ್ಧ ಇದೀಗ 10 ಕೋಟಿ ರೂ. ಮೊಕದ್ದಮೆ ಹೂಡಿದ್ದಾರೆ.
ಕೋರ್ಟ್ ನಲ್ಲಿ ಸಾರ್ವಜನಿಕವಾಗಿ ಸಚಿವರ ವಿರುದ್ಧ ಇಂತಹ ಹೇಳಿಕೆ ನೀಡಿರುವ ಕಾರಣಕ್ಕೆ ಹೊಸದಾಗಿ ಮತ್ತೊಂದು ಮೊಕದ್ದಮೆ ಹೂಡಲಾಗುತ್ತಿದೆ ಎಂದು ಜೇಟ್ಲಿ ಪರ ವಕೀಲರು ತಿಳಿಸಿದ್ದಾರೆ. ಜೇಠ್ಮಲಾನಿ ಕೇಜ್ರಿವಾಲ್ ನಿರ್ದೇಶನದಂತೆ ಈ ಮಾತು ಹೇಳಿದ್ದಾರೆ ಎಂದು ಜೇಟ್ಲಿ ಪರ ವಕೀಲರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ