Publish Date: Fri, 31 Jul 2026 (09:45 IST)
Updated Date: Fri, 31 Jul 2026 (09:56 IST)
ನವದೆಹಲಿ: ಒಂದು ವೇಳೆ ವಿದ್ಯಾರ್ಥಿಗಳು ಪ್ರತಿಭಟನೆ ವೇಳೆ ನಿಂದನಾತ್ಮಕ ಪದ ಬಳಸಿದ್ರೂ ಆ ನೆಪದಲ್ಲಿ ಅವರ ಮೇಲೆ ಕೇಸ್ ಹಾಕಬಾರದು. ಪ್ರಕರಣ ಹಿಂಪಡೆಯದೇ ಇದ್ದರೆ ನಾವು ಮತ್ತೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಿಜೆಪಿ ವಕ್ತಾರ ಸೌರವ್ ದಾಸ್ ಬೆದರಿಕೆ ಹಾಕಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಉದ್ಭವಿಸಿದ ಆಕ್ಷೇಪಾರ್ಹ ಹೇಳಿಕೆಗಳು ಹಾಗೂ ಪೋಲಿಸ್ ಪ್ರಕರಣಗಳ ಕುರಿತು ಪ್ರತಿಕ್ರಿಯಿಸಿರುವ ಪಾರ್ಟಿ ವಕ್ತಾರ ಸೌರವ್ ದಾಸ್, ರಾಜಕೀಯ ಹಾಗೂ ಕಾನೂನು ವಲಯದಲ್ಲಿ ಮಹತ್ವದ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ಪ್ರತಿಭಟನೆಯ ಸಮಯದಲ್ಲಿ ಯಾರಾದರೂ ನಿಂದನಾತ್ಮಕ ಅಥವಾ ಆಕ್ಷೇಪಾರ್ಹ ಭಾಷೆಯನ್ನು ಬಳಸಿದ್ದರೆ, ಅದರಿಂದ ನೊಂದ ವ್ಯಕ್ತಿಗಳು ಕಾನೂನುಬದ್ಧವಾಗಿ ಮಾನನಷ್ಟ ಮೊಕದ್ದಮೆ ಹೂಡಬಹುದು. ಕೇವಲ ಆಕ್ಷೇಪಾರ್ಹ ಅಥವಾ ಖಂಡನೀಯ ಭಾಷೆ ಬಳಸಿದ್ದಕ್ಕಾಗಿ ಪ್ರತಿಭಟನಾಕಾರರ ವಿರುದ್ಧ ಸರ್ಕಾರಿ ಅಪರಾಧ ನಿಯಂತ್ರಣ ಯಂತ್ರಾಂಗವನ್ನು ಬಳಸುವುದು ಮತ್ತು ಎಫ್‌ಐಆರ್‌ಗಳನ್ನು ದಾಖಲಿಸುವುದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ. ಇದು ವಾಕ್ ಸ್ವಾತಂತ್ರ್ಯಕ್ಕೆ ಭಂಗ ತರುತ್ತದೆ.
ಸಾರ್ವಜನಿಕವಾಗಿ ಮತ್ತು ಪ್ರತಿಭಟನೆಗಳ ವೇಳೆ ಮಾತನಾಡುವಾಗ ಯುವ ಪೀಳಿಗೆಯು ತಮ್ಮ ಶಬ್ದಗಳ ಆಯ್ಕೆ ಮತ್ತು ನಡವಳಿಕೆಯಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕು ಹಾಗೂ ಇತರರಿಗೆ ಗೌರವ ನೀಡಬೇಕು ಎಂದು ದಾಸ್ ಮನವಿ ಮಾಡಿದ್ದಾರೆ. ಪೋಲೀಸ್ ಇಲಾಖೆಯು ಶಾಂತವಾಗಿರಬೇಕು ಮತ್ತು ರಾಜಕೀಯ ಲಾಭಕ್ಕೋಸ್ಕರ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಅವರು ಆಗ್ರಹಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ