Publish Date: Fri, 31 Jul 2026 (09:25 IST)
Updated Date: Fri, 31 Jul 2026 (09:34 IST)
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಲು ಆದೇಶಿಸಿರುವುದನ್ನು ಖಂಡಿಸಿ, 'ಕರ್ನಾಟಕ ಬಂದ್' ಆಯೋಜಿಸುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲು ಕನ್ನಡ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಇಂದು ಮಹತ್ವದ ಸಭೆ ನಡೆಸಿ ಸಮಾಲೋಚಿಸಲಿವೆ.
ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ರಾಜ್ಯದ ಪ್ರಮುಖ ಕನ್ನಡಪರ ಸಂಘಟನೆಗಳ ಮುಖಂಡರು ಸಭೆ ಸೇರಿ ಬಂದ್ ನಡೆಸುವ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ. ಕೆಎಸ್ಆರ್‌ಟಿಸಿ, ಬಿಎಂಆರ್‌ಟಿಸಿ ನೌಕರರ ಸಂಘಟನೆಗಳು, ಆಟೋ ಹಾಗೂ ಆ್ಯಪ್ ಆಧಾರಿತ ಟ್ಯಾಕ್ಸಿ ಚಾಲಕರ ಸಂಘಟನೆಗಳಿಂದ ಬೆಂಬಲ ಪಡೆಯಲು ಪ್ರಯತ್ನಿಸಲಾಗುತ್ತಿದೆ.
ಚಿತ್ರರಂಗ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಲಿದೆಯೇ ಹಾಗೂ ಚಿತ್ರೀಕರಣ ಮತ್ತು ಪ್ರದರ್ಶನಗಳನ್ನು ರದ್ದುಗೊಳಿಸಲಿದೆಯೇ ಎಂಬ ನಿರ್ಧಾರವೂ ಇಂದು ಹೊರಬೀಳಲಿದೆ. ಹೋಟೆಲ್ ಮಾಲೀಕರ ಸಂಘ ಹಾಗೂ ಲಾರಿ ಮಾಲೀಕರ ಸಂಘಟನೆಗಳ ಬೆಂಬಲದ ಕುರಿತು ಚರ್ಚೆ ನಡೆಯಲಿದೆ. ಮಂಡ್ಯ, ಮೈಸೂರು ಮತ್ತು ಚಾಮರಾಜನಗರದಲ್ಲಿ ರೈತ ಸಂಘಟನೆಗಳ ಪ್ರತಿಭಟನೆ ಈಗಾಗಲೇ ತೀವ್ರಗೊಂಡಿದೆ. ತಮಿಳುನಾಡಿಗೆ ನೀರು ಹರಿಸುವುದನ್ನು ತಕ್ಷಣವೇ ನಿಲ್ಲಿಸಿ, ಸುಪ್ರೀಂ ಕೋರ್ಟ್‌ನಲ್ಲಿ ತಡೆಜ್ಞೆ ತರಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ರೈತ ನಾಯಕರು ಆಗ್ರಹಿಸಿದ್ದಾರೆ.
ಇಂದಿನ ಸಭೆಯ ನಂತರ 'ಕರ್ನಾಟಕ ಬಂದ್' ಯಾವಾಗ ನಡೆಯಲಿದೆ ಹಾಗೂ ಶಾಲಾ-ಕಾಲೇಜು, ಬಸ್ ಸಾರಿಗೆ ಮತ್ತು ಅಂಗಡಿ ಮುಂಗಟ್ಟುಗಳ ಮೇಲೆ ಬಂದ್‌ನ ಪ್ರಭಾವ ಹೇಗಿರಲಿದೆ ಎಂಬ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ