Webdunia - Bharat's app for daily news and videos

Install App

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಗುವಿನ ಜೊತೆ ಫ್ರೆಂಡ್ ಶಿಪ್ ಬೆಳೆಸಲು ಹೀಗೆ ಮಾಡಿ

Krishnaveni K
ಗುರುವಾರ, 14 ನವೆಂಬರ್ 2024 (09:21 IST)
ಬೆಂಗಳೂರು: ಇಂದು ಭಾರತದ ಪ್ರಥಮ ಪ್ರಧಾನಿ ಜವಹರ ಲಾಲ್ ನೆಹರೂ ಜನ್ಮ ದಿನ ನಿಮಿತ್ತ ದೇಶದಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಕ್ಕಳ ಪಾಲಿಗೆ ಅವರು ಪ್ರೀತಿಯ ಚಾಚಾ ಆಗಿದ್ದವರು. ಅವರ ಗೌರವಾರ್ಥ ಈ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.

ಮಕ್ಕಳು ಎಂದ ತಕ್ಷಣ ಮುಗ್ಧತೆ, ಖುಷಿ, ತುಂಟಾಟಗಳೇ ನೆನಪಿಗೆ ಬರುತ್ತವೆ. ಇಂದಿನ ಮಕ್ಕಳು ಹಿಂದಿನವರಂತಲ್ಲ. ಹಿಂದಿನ ಮಕ್ಕಳಿಗೆ ಅಪ್ಪ-ಅಮ್ಮ ಎಂದರೆ ಒಂದು ರೀತಿಯ ಭಯ ಮಿಶ್ರಿತ ಪ್ರೀತಿಯಿತ್ತು. ಆದರೆ ಇಂದಿನ ಮಕ್ಕಳು ತಮ್ಮ ತಂದೆ-ತಾಯಿ ಬಳಿ ಒಬ್ಬ ಗೆಳೆಯ/ಗೆಳತಿಯನ್ನು ನೋಡಲು ಬಯಸುತ್ತಾರೆ.

ಆಧುನಿಕ ಜಗತ್ತಿನಲ್ಲಿ, ಕಿರಿದಾದ ಕುಟುಂಬದಲ್ಲಿ ಇದು ಅಗತ್ಯ ಕೂಡಾ. ಮಕ್ಕಳಿಗೂ ತಮ್ಮ ಭಾವನೆ ಹಂಚಿಕೊಳ್ಳಲು ಹೆಚ್ಚು ಜನರ ಒಡನಾಟವಿರುವುದಿಲ್ಲ. ಹೀಗಾಗಿ ಅಪ್ಪ-ಅಮ್ಮನೇ ಗೆಳೆಯರಾಗಬೇಕಾಗುತ್ತದೆ. ಒಂದು ಹಂತವಾದ ಮೇಲೆ ಮಕ್ಕಳು ತಮ್ಮ ಪೋಷಕರಿಂದ ಅತಿಯಾದ ಸಲಹೆಗಳನ್ನು ಕೇಳಲು ಬಯಸುವುದಿಲ್ಲ.

ಮಕ್ಕಳನ್ನು ಗೆಳೆಯರಂತೆ ನೋಡಬೇಕು ಎಂದು ಬಲ್ಲವರು ಹೇಳುತ್ತಾರೆ. ಆದರೆ ನಮ್ಮ ಮಕ್ಕಳು ನಮ್ಮ ಜೊತೆ ಗೆಳೆಯರಾಗಿರಬೇಕಾದರೆ ಅವರಿಗೆ ಅಗತ್ಯಕ್ಕಿಂತ ಹೆಚ್ಚು ಬುದ್ಧಿ ಹೇಳುವುದನ್ನು ಬಿಡಬೇಕು. ಅವರು ಹೊರ ಪ್ರಪಂಚವನ್ನು ತಾನಾಗಿಯೇ ಕಲಿಯಲು ಬಿಡಬೇಕು. ಅವರಿಗೆ ಅಗತ್ಯವೆನಿಸಿದರೆ ಮಾತ್ರ ಬುದ್ಧಿವಾದ ಹೇಳಬೇಕು. ತಾವು ದೊಡ್ಡವರು, ತಾನು ಹೇಳಿದಂತೆ ಕೇಳಬೇಕು ಎನ್ನುವ ಹಠ, ಧೋರಣೆಯನ್ನು ಮಕ್ಕಳ ಮೇಲೆ ಹೇರಲು ಹೋದರೆ ಅವರು ಖಂಡಿತಾ ಒಳ್ಳೆಯ ಗೆಳೆಯರಂತೆ ನಿಮ್ಮ ಜೊತೆ ಒಡನಾಟವಿಟ್ಟುಕೊಳ್ಳಲ್ಲ. ನಿಮ್ಮಿಂದ ದೂರ ಹೋಗಲು ಬಯಸುತ್ತಾರೆ.

ಮಕ್ಕಳು ನಮ್ಮ ಜೊತೆಗೇ ಇರಬೇಕೆಂದರೆ ಅವರ ಜೊತೆ ಅವರಾಗಿ ಬೆರೆಯಬೇಕು. ಕೆಲವೊಮ್ಮೆ ಅವರು ಶಾಲೆಯಲ್ಲಿ ಮಾಡಿದ ತುಂಟಾಟವನ್ನು ನಗುತ್ತಲೇ ಸ್ವೀಕರಿಸಬೇಕು! ಅವರು ಮಾಡುವ ಸಣ್ಣ ಪುಟ್ಟ ತಪ್ಪುಗಳಿಗೆ ದಂಡಿಸುವ ತಪ್ಪು ಮಾಡುವ ಬದಲು ಹೀಗೆ ತಪ್ಪು ಮಾಡಿದರೆ ಏನಾಗುತ್ತದೆ ಎಂಬುದನ್ನು ನಿಮ್ಮದೇ ಉದಾಹರಣೆ ಕೊಟ್ಟು ತಿಳಿಹೇಳಬೇಕು.

ಶಾಲೆಯಿಂದ ಮನೆಗೆ ಬಂದ ತಕ್ಷಣ ಅಲ್ಲಿ ನಡೆದ ಪ್ರತಿಯೊಂದು ವಿಚಾರವನ್ನು ಆಸಕ್ತಿ ಕೇಳಬೇಕು. ನೀವು ಉತ್ತಮ ಕೇಳುಗರಾದರೆ ಅವರೂ ನಿಮ್ಮ ಬಳಿ ಎಲ್ಲವನ್ನೂ ಶೇರ್ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳುತ್ತಾರೆ. ಮಕ್ಕಳನ್ನು ಪೋಷಕರೆಂಬ ಹಮ್ಮಿನಲ್ಲಿ ಬೆಳೆಸದೇ ಗೆಳೆಯನಾಗಿ ಅವರ ಜೊತೆ ನಿಲ್ಲಲು ಪ್ರಾರಂಭಿಸಿ. ಅವರು ಎಂದಿಗೂ ನಿಮ್ಮನ್ನು ಧಿಕ್ಕರಿಸುವುದಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಹಲಸಿನ ಹಣ್ಣು ತಿಂದು ವಾಹನ ಚಲಾಯಿಸುವಾಗ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ರೆ ಕತೆ ಫಿನಿಶ್

ವಿಧಾನಸಭೆ ಗೆಲ್ಲಲು ನೀವೆಷ್ಟು ಅಕ್ರಮ ಮಾಡಿದ್ದೀರಿ: ರಾಹುಲ್ ಗಾಂಧಿಗೆ ಸಿಟಿ ರವಿ ತಿರುಗೇಟು

Gold Price: ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ಆರ್ ಎಸ್ಎಸ್ ವಿಷವಿದ್ದಂತೆ ಎಂದ ಮಲ್ಲಿಕಾರ್ಜುನ ಖರ್ಗೆ: ವಿಷ ಹಾಕಿದವರು ನೀವು ಎಂದ ವಿಜಯೇಂದ್ರ

ಮುಂದಿನ ಸುದ್ದಿ
Show comments