Select Your Language

Notifications

webdunia
webdunia
webdunia
webdunia

ಗಣರಾಜ್ಯೋತ್ಸವದ ಹಿನ್ನಲೆ ಕೇಂದ್ರ ಸರ್ಕಾರದಿಂದ ಪದ್ಮ ಪುರಸ್ಕೃತರ ಪಟ್ಟಿ ಬಿಡುಗಡೆ

ನವದೆಹಲಿ
ನವದೆಹಲಿ , ಭಾನುವಾರ, 26 ಜನವರಿ 2020 (07:05 IST)
ನವದೆಹಲಿ : ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಪದ್ಮ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಏಳು ಮಂದಿ ಪದ್ಮವಿಭೂಷಣ, 16 ಮಂದಿ ಪದ್ಮಭೂಷಣ ಹಾಗೂ 118 ಮಂದಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ಅರುಣ್ ಜೇಟ್ಲಿ , ಸುಷ್ಮಾ ಸ್ವರಾಜ್, ಜಾರ್ಜ್ ಫರ್ನಾಂಡೀಸ್  ಅವರಿಗೆ (ಮರಣೋತ್ತರ) ಪದ್ಮವಿಭೂಷಣ ಗೌರವ ನೀಡಲಾಗಿದೆ. ಗೋವಾದ ಸಿಎಂ ಆಗಿದ್ದ ಮನೋಹರ್ ಪರಿಕ್ಕರ್ ಹಾಗೂ ಪಿವಿ ಸಿಂಧೂಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆಯಾಗಿದೆ.


ಹಾಗೇ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡಿ  ಅರಣ್ಯ ಅಭಿವೃದ್ಧಿ ಪಡಿಸಿದ ಹಾಲಕ್ಕಿ ಸಮುದಾಯದ ತುಳಸಿ ಗೌಡ, ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿಸಿದ ಹಾಜಬ್ಬ, ವಿಜಯ ಸಂಕೇಶ್ವರ್, ಕೆ.ವಿ.ಸಂಪತ್ ಕುಮಾರ್, ಕ್ರೀಡಾಪಟು ಎಂಪಿ ಗಣೇಶ್ ಮುಂತಾದವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಟೂರಿಸಂಗೆ ಬ್ರೇಕ್ ಹಾಕಲು ಟ್ರಂಪ್ ಸರ್ಕಾರ ನಿರ್ಧಾರ