ಟೀಕೆಗಳೆನ್ನುವ ವಿಷವನ್ನು ಕುಡಿದು ಅರಗಿಸಿಕೊಳ್ಳುವ ಶಕ್ತಿಯಿದೆ. ಟೀಕೆಗಳ ಮಧ್ಯೆ ದೇಶದ ಸೇವೆ ಮುಂದುವರಿಸುತ್ತೇನೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
	ಪ್ರಧಾನಮಂತ್ರಿಯಾದ ನಂತರ ತಮ್ಮ ತವರಿಗೆ ಮೊದಲ ಬಾರಿ ವಡ್ನಾಗರ್‌ಗೆ ಭೇಟಿ ನೀಡಿರುವ ಮೋದಿ, ಟೀಕೆಗಳೆನ್ನುವ ವಿಷವನ್ನು ಕುಡಿಯಲು ಇಲ್ಲಿಂದಲೇ ಆರಂಭಿಸಿದ್ದೇನೆ ಎಂದು ತಿಳಿಸಿದ್ದಾರೆ.
 
 			
 
 			
					
			        							
								
																	
	 
	ವಾಡ್ನಗರ್‌ನ ಹಟಕೇಶ್ವರ್ ದೇವರ ಆಶೀರ್ವಾದದಿಂದ ಕಾಶಿಗೆ ತಲುಪಿದ್ದೇನೆ. ವಾಡ್ನಗರ್‌ನಂತೆ ಕಾಶಿ ಕೂಡಾ ಪರಶಿವನ ತಾಣವಾಗಿದೆ. ನನ್ನ ವಿರೋಧಿಗಳ ಟೀಕೆಗಳೆನ್ನುವ ವಿಷವನ್ನು ಅರಗಿಸಿ, ದೇಶದ ಸೇವೆ ಮಾಡುವಂತಹ ಆಶೀರ್ವಾದವನ್ನು ದೇವರು ನೀಡಿದ್ದಾನೆ ಎಂದು ತಿಳಿಸಿದ್ದಾರೆ.   
	 
	ಬಿಜೆಪಿ ಅಭಿವೃದ್ಧಿ ವಿಷಯವನ್ನು ಚುನಾವಣಾ ಅಜೆಂಡಾವಾಗಿರಿಸಿಕೊಂಡು ಚುನಾವಣೆಯನ್ನು ಎದುರಿಸಲು ಸಿದ್ದತೆ ನಡೆಸುತ್ತಿದೆ.  ರಾಜ್ಯದ 182 ವಿಧಾನಸಭಾ ಕ್ಷೇತ್ರಗಳಲ್ಲಿ 149 ಕ್ಕೂ ಅಧಿಕ ಗುಜರಾತ್ ಗೌರವ್ ಯಾತ್ರೆಯನ್ನು ಆರಂಭಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
	
	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.