Publish Date: Mon, 09 Oct 2017 (14:57 IST)
Updated Date: Mon, 09 Oct 2017 (15:02 IST)
ಬೆಂಗಳೂರು: ಬಿಎಸ್ ವೈ ಮತ್ತು ಅನಂತಕುಮಾರ್ ವಿರುದ್ಧ ಎಸಿಬಿ ಎಫ್ಐಆರ್ ದಾಖಲಿಸುವ ಬಗ್ಗೆ ಹೇಳೋಕೆ ನಾನೇನು ಸಿಎಂ ಅಲ್ಲ. ಹೋಮ್ ಮಿನಿಸ್ಟರ್ ಕೂಡಾ ಅಲ್ಲ. ನಾನು ಇಂಧನ ಸಚಿವ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಿಎಂ ನಿವಾಸ ಕಾವೇರಿಯಲ್ಲಿ ಮಾತನಾಡಿದ ಇಂಧನ ಸಚಿವ ಡಿಕೆಶಿ, ಎಫ್ಐಆರ್ ದಾಖಲಿಸುವ ಬಗ್ಗೆ ಪ್ರತಿಕ್ರಿಯಿಸಲು ನಾನೇನು ಸಿಎಂ ಅಲ್ಲ, ಹೋಮ್ ಮಿನಿಸ್ಟರೂ ಅಲ್ಲ. ನಾನು ಇಂಧನ ಸಚಿವ. ಯಾವುದೇ ದೂರು ದಾಖಲಿಸಲಿ ಫೇಸ್ ಮಾಡ್ತೇವೆ ಅಂತ ಬಿಎಸ್ ವೈ ಹೇಳಿದ್ದಾರೆ. ಯಾವ ನಾಯಕರು ಕೇಸುಗಳನ್ನು ಫೇಸ್ ಮಾಡುವುದಕ್ಕಾಗಲ್ಲ ಎಂದು ಯಾರೂ ಹೇಳಲ್ಲ. ಫೇಸ್ ಮಾಡ್ತೇವೆ ಅಂತಾನೇ ಹೇಳ್ತಾರೆ ಎಂದರು.
ಫಾರೆನ್ಸಿಕ್ ಇಲಾಖೆ ಬಹಳ ವಿಚಾರಗಳ ಬಗ್ಗೆ ವರದಿ ನೀಡಬೇಕಿದೆ ಎಂದು ಹೇಳುವ ಮೂಲಕ ಸಾಕಷ್ಟು ವಿಡಿಯೋ, ಆಡಿಯೋಗಳಿದೆ ಎನ್ನುವುದರ ಬಗ್ಗೆ ಡಿಕೆಶಿ ಸುಳಿವು ನೀಡಿದ್ದಾರೆ. ಸಮಯ ಬಂದಾಗ, ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡ್ತೇವೆ. ಈ ಬಗ್ಗೆ ಎಫ್ಐಆರ್ ದಾಖಲಿಸೋದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದರು.