Publish Date: Sun, 08 Oct 2017 (11:20 IST)
Updated Date: Sun, 08 Oct 2017 (11:23 IST)
ವಡ್ನಗರ್: ಪ್ರಧಾನಿಯಾದ ಮೇಲೆ ಮೊದಲ ಬಾರಿಗೆ ತಮ್ಮ ತವರು ವಡ್ನಗರ್ ಗೆ ಭೇಟಿ ನೀಡಿದ ಪ್ರಧಾನಿ ಮೋದಿ ತಾವು ಕಲಿತ ಶಾಲೆಗೂ ಭೇಟಿ ನೀಡಿದ್ದಾರೆ.
ತಮ್ಮ ಬಾಲ್ಯ ಕಳೆದ ಶಾಲೆಗೆ ಬಂದಾಗ ನೆಲದ ಮೇಲೆ ಮಂಡಿಯೂರಿ ನಮಸ್ಕಾರ ಮಾಡಿದ ಪ್ರಧಾನಿ ಮೋದಿ ಮಣ್ಣನ್ನು ತಿಲಕವಿಟ್ಟುಕೊಂಡಿದ್ದಾರೆ. ಪ್ರಧಾನಿ ಮೋದಿ ಜತೆಗೆ ಗುಜರಾತ್ ಸಿಎಂ ವಿಜಯ್ ರೂಪಾನಿ ಕೂಡಾ ಇದ್ದರು.
ಪ್ರಧಾನಿಯಾದ ಮೇಲೆ ಮೊದಲ ಬಾರಿಗೆ ಭೇಟಿ ಕೊಡುತ್ತಿರುವ ಮಣ್ಣಿನ ಮಗನನ್ನು ನೋಡಲು ಸಾವಿರಾರು ಮಂದಿ ನೆರೆದಿದ್ದರು. ಭವ್ಯ ಸ್ವಾಗತವೇ ಮೋದಿಗೆ ದೊರಕಿತು. ಸ್ಥಳೀಯ ಶಿವ ದೇಗುಲಕ್ಕೆ ಭೇಟಿ ನೀಡಿದ ಮೋದಿ ಮೆಡಿಕಲ್ ಕಾಲೇಜು ಉದ್ಘಾಟನೆ ನೆರವೇರಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ