Publish Date: Sun, 22 Nov 2020 (06:54 IST)
Updated Date: Sun, 22 Nov 2020 (06:57 IST)
ಆಗ್ರಾ : ಮನೆಗೆ ದರೋಡೆ ಮಾಡಲು ಬಂದವ 37 ವರ್ಷದ ದಂತ ವೈದ್ಯೆ ಹಾಗೂ ಆಕೆಯ 4ಮತ್ತು8 ವರ್ಷದ ಇಬ್ಬರು ಹೆಣ್ಣಮಕ್ಕಳ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.
ಡಾ.ನಿಶಾ ಸಿಂಘಾಲ್ ಮೃತಪಟ್ಟ ದಂತ ವೈದ್ಯೆ, ಸಂಜೆಯ ವೇಳೆ ಕೇಬಲ್ ರಿಚಾರ್ಜ್ ಮಾಡುವ ನೆಪದಲ್ಲಿ ಮನೆಗೆ ಬಂದ ವ್ಯಕ್ತಿಯೊಬ್ಬ ಕಳ್ಳತನ ಮಾಡಲು ಯತ್ನಿಸಿದ್ದಾನೆ. ಆ ವೇಳೆ ಮಹಿಳೆ ಇದನ್ನು ವಿರೋಧಿಸಿದ್ದಕ್ಕೆ ಮಹಿಳೆ ಹಾಗೂ ಮಕ್ಕಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಮನೆಗೆ ಬಂದ ಪತಿ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಮಹಿಳೆ ಸಾವನಪ್ಪಿದ್ದಾಳೆ. ಈ ಬಗ್ಗೆ ಪತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸಿಸಿಟಿವಿಯ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು ಶನಿವಾರ ಆತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.