Publish Date: Wed, 21 Oct 2020 (09:09 IST)
Updated Date: Wed, 21 Oct 2020 (09:11 IST)
ಆಗ್ರಾ : ಅಪ್ರಾಪ್ತ ಬಾಲಕನೊಬ್ಬ 5 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಉತ್ತರಪ್ರದೇಶದ ಅಲಿಗರ್ ನಲ್ಲಿ ನಡೆದಿದೆ.
ಬಾಲಕಿ ಚೆಂಡಾಟವಾಡುತ್ತಿದ್ದಾಗ ಚೆಂಡು ಅಪ್ರಾಪ್ತ ಬಾಲಕನ ಮನೆಗೆ ಹೋಗಿದೆ. ಬಾಲಕಿ ಅದನ್ನು ತೆಗೆದುಕೊಂಡು ಬರಲು ಹೋದಾಗ ಬಾಲಕ ಆಕೆಯನ್ನು ಹಿಡಿದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಬಾಲಕನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಜುವೆನೈಲ್ ಜಸ್ಟೀಸ್ ಮಂಡಳಿಯ ಮುಂದೆ ಹಾಜರುಪಡಿಸಿದ್ದಾರೆ ಎನ್ನಲಾಗಿದೆ.