Select Your Language

Notifications

webdunia
webdunia
webdunia
webdunia

ಬುಲ್ಡೋಜರ್‌ನಿಂದ ರಾಮ ರಾಜ್ಯದ ಕಲ್ಪನೆ ಧ್ವಂಸ : ಅಖಿಲೇಶ್

ಬುಲ್ಡೋಜರ್‌ನಿಂದ ರಾಮ ರಾಜ್ಯದ ಕಲ್ಪನೆ ಧ್ವಂಸ : ಅಖಿಲೇಶ್
ಲಕ್ನೋ , ಸೋಮವಾರ, 13 ಜೂನ್ 2022 (11:59 IST)
ಲಕ್ನೋ : ಬಿಜೆಪಿಯು ತನ್ನ ಮಾತೃ ಸಂಘಟನೆಯಾದ ಆರ್ಎಸ್ಎಸ್ ಸೂಚನೆಗಳ ಮೇರೆಗೆ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕಿಡಿಕಾರಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸದಸ್ಯರ ಮಾತಿನಿಂದ ದೊಡ್ಡ ಸಮುದಾಯಕ್ಕೆ ನೋವಾಗಿದ್ದು, ರಾಜ್ಯವನ್ನು ಧ್ವಂಸಗೊಳಿಸುತ್ತಿರುವ ಭಯಾನಕ ಅಶಾಂತಿ ಘಟನೆಗಳ ಹಿಂದೆ ಇದೇ ರಾಜಕೀಯವಿದೆ.

ಈ ದುರದೃಷ್ಟಕರ ವಿವಾದವನ್ನು ಪರಿಹರಿಸಲು ಬಿಜೆಪಿ ಸರ್ಕಾರವು ಯಾವುದೇ ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ದೂರಿದರು.

ನಮ್ಮ ಸಂಸ್ಕೃತಿ, ಧರ್ಮ ಮತ್ತು ಸಂವಿಧಾನವು ಯಾವುದೇ ಶಾಸನಬದ್ಧ ನಿಬಂಧನೆಗಳಿಲ್ಲದೆ ಯಾರೊಬ್ಬರ ಮನೆ ಅಥವಾ ಅಂಗಡಿಯನ್ನು ಧ್ವಂಸ ಮಾಡಲು ಅಥವಾ ಅಮಾಯಕರನ್ನು ಬಂಧಿಸಲು ಅವಕಾಶವಿಲ್ಲ.

ಆದರೆ ಈ ಶಾಂತಿಯುತ ಪ್ರತಿಭಟನೆ ನಡೆಸುವ ಜನರ ಪ್ರಜಾಸತ್ತಾತ್ಮಕ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದು, ಬಿಜೆಪಿ ಆಡಳಿತದಲ್ಲಿ ಉತ್ತರ ಪ್ರದೇಶ ಇಡೀ ವಿಶ್ವದ ಮುಂದೆ ತಲೆತಗ್ಗಿಸುವಂತಾಗಿದೆ ಎಂದು ಹೇಳಿದ್ದಾರೆ. 

ಇದರ ಮಧ್ಯೆ ಅಧಿಕಾರಿಗಳು ಆರೋಪಿಗಳು ಅವರ ಸಂಬಂಧಿಕರು ಅಥವಾ ಸಹಚರರಿಗೆ ಸೇರಿದ ಅನೇಕ ಕಟ್ಟಡಗಳನ್ನು ಧ್ವಂಸ ಮಾಡಲು ಸೂಚಿಸಲಾಗಿತ್ತು. ರಾಜ್ಯವು ಸಹರಾನ್ಪುರ, ಪ್ರಯಾಗ್ರಾಜ್ ಮತ್ತು ಕಾನ್ಪುರ್ ಜಿಲ್ಲೆಯಲ್ಲಿನ ಆಸ್ತಿಗಳನ್ನು ಧ್ವಂಸ ಮಾಡಲಾಯಿತು.


Share this Story:

Follow Webdunia kannada

ಮುಂದಿನ ಸುದ್ದಿ

ಬಡವರ ಸೂರಿಗೆ ಸರ್ಕಾರಿ ಜಮೀನು ಮೀಸಲು : ಸಿಎಂ