Select Your Language

Notifications

webdunia
webdunia
webdunia
webdunia

ಮಾಜಿ ಸಿಎಂ ಪುತ್ರ ಆಕಾಂಕ್ಷಿಗಳಿಂದ ನಗದು ವಸೂಲಿ ಆರೋಪ

ಮಾಜಿ ಸಿಎಂ ಪುತ್ರ ಆಕಾಂಕ್ಷಿಗಳಿಂದ ನಗದು ವಸೂಲಿ ಆರೋಪ
ಬೆಂಗಳೂರು , ಬುಧವಾರ, 4 ಮೇ 2022 (12:52 IST)
ಖ್ಯಾತ ವಕೀಲ ಜಗದೀಶ್ ರಾಜಕಾರಣಿಯೊಬ್ಬರ ಪುತ್ರನ ವಿರುದ್ಧ ಹಲವು ಆರೋಪಗಳನ್ನು ಎತ್ತಿದ್ದು, ಪಿಎಸ್ ಐ ನೇಮಕಾತಿ ಹಗರಣದಲ್ಲಿ ಆಕಾಂಕ್ಷಿಗಳಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
 
ಈ ಹಗರಣವು ಸುಮಾರು 500 ಕೋಟಿ ರೂಪಾಯಿಗಳಾಗಿದ್ದು, ಮಾಜಿ ಮುಖ್ಯಮಂತ್ರಿಯ ಮಗ 200 ಕೋಟಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಗೊತ್ತಿದ್ದರೂ ಅವರನ್ನು ವಿಚಾರಣೆ ನಡೆಸಿಲ್ಲ ಎಂದು ಜಗದೀಶ್ ಆರೋಪಿಸಿದ್ದಾರೆ.

ನೇಮಕಾತಿಯ ಉಸ್ತುವಾರಿ ವಹಿಸಿರುವ ಎಡಿಜಿಪಿಯನ್ನು ಮಾತ್ರ ವರ್ಗಾವಣೆ ಮಾಡಲಾಗಿದೆ ಆದರೆ ವಿಚಾರಣೆ ನಡೆಸಿಲ್ಲ. ಈಗಿನ ಡಿಜಿ ಮತ್ತು ಐಜಿಪಿ ಈ ಹಗರಣದ ಬಗ್ಗೆ ಸರ್ಕಾರವನ್ನು ಸಮರ್ಥಿಸುತ್ತಿದ್ದಾರೆ ಎಂದು ಆರೋಪಿಸಿದರು.

ಒಟ್ಟು 545 ಸಬ್ಇನ್ಸ್ಪೆಕ್ಟರ್ಗಳನ್ನು ನೇಮಕ ಮಾಡಲಾಗಿದ್ದು, 500 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಗರಣವಿರಬಹುದು ಎಂದು ಜಗದೀಶ್ ಸಂದೇಹ ವ್ಯಕ್ತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೊಬೈಲ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಏನ್ ಮಾಡುದ್ಲು ಗೊತ್ತ?