Webdunia - Bharat's app for daily news and videos

Install App

ದುಡ್ಡಿನ ಆಸೆಗೆ ತಂಗಿಯನ್ನೇ ಮದುವೆಯಾಗಲು ಹೊರಟ ಅಣ್ಣ

Krishnaveni K
ಮಂಗಳವಾರ, 19 ಮಾರ್ಚ್ 2024 (12:04 IST)
ಲಕ್ನೋ: ಅಣ್ಣ-ತಂಗಿಯ ಸಂಬಂಧ ಎಂದರೆ ನಮ್ಮ ದೇಶದಲ್ಲಿ ಅಷ್ಟೇ ಪಾವಿತ್ರ್ಯತೆ ಇದೆ. ಅವರ ಸಂಬಂಧ ಅಷ್ಟೇ ನಿಷ್ಕಲ್ಮಶ. ಆದರೆ ಇದೀಗ ದುಡ್ಡಿನ ಆಸೆಗೆ ಇಲ್ಲೊಬ್ಬ ಅಣ್ಣ-ತಂಗಿ ಸಂಬಂಧವನ್ನೇ ಬಲಿಕೊಟ್ಟಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಹಿಂದುಳಿದ ಜೋಡಿಗಳ ಸಾಮೂಹಿಕ ಮದುವೆ ಮಾಡಿಸಿ ನವಜೋಡಿಗೆ ಮನೆ ಸಾಮಾನು, 35 ಸಾವಿರ ರೂ. ನಗದು ನೀಡುತ್ತದೆ. ಈ ಯೋಜನೆಯ ಲಾಭ ಪಡೆಯಲು ಅಣ್ಣ-ತಂಗಿ ಮದುವೆಯ ನಾಟಕವಾಡಿದ್ದಾರೆ.

ಸರ್ಕಾರದ ಯೋಜನೆಯನ್ನು ಹೇಗಾದರೂ ಲಾಭಕ್ಕೆ ಬಳಸಿಕೊಳ‍್ಳಲು ಎಲ್ಲರೂ ಒಂದಿಲ್ಲೊಂದು ದಾರಿ ನೋಡಿಕೊಳ್ಳುತ್ತಾರೆ. ಆದರೆ ಈ ಅಣ್ಣ-ತಂಗಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಬಂಧದ ಪಾವಿತ್ರ್ಯತೆಯನ್ನೇ ಹಾಳು ಮಾಡಲು ಹೊರಟಿದ್ದಾರೆ. ಹಣದ ಆಸೆಗೆ ಬಿದ್ದು ಮದುವೆಯಾಗಲು ಹೊರಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ವಿಶೇಷವೆಂದರೆ ತಂಗಿಗೆ ಈ ಮೊದಲೇ ಮದುವೆಯಾಗಿತ್ತು. ಗಂಡ ಇನ್ನೊಂದು ಊರಿನಲ್ಲಿದ್ದ. ತಂಗಿಗೆ ಇನ್ನೊಂದು ವರನೊಂದಿಗೆ ಮದುವೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಈ ವೇಳೆ ಮೊದಲೇ ಯೋಜನೆ ರೂಪಿಸಿದಂತೆ ವರ ಮಂಟಪಕ್ಕೆ ಬರಲೇ ಇಲ್ಲ. ಬಳಿಕ ಅಲ್ಲೇ ಇದ್ದ ಅಣ್ಣನ ಮನವೊಲಿಸುವ ನಾಟಕವಾಡಿ ಮದುವೆ ಮಾಡಿಸಿದ್ದಾರೆ.  ಇವರ ಈ ನಾಟಕ ಇದೀಗ ಬಯಲಾಗಿದ್ದು, ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇವಿಎಂ ಬದಲು ಬ್ಯಾಲೆಟ್ ಪೇಪರ್: ರಾಹುಲ್ ಗಾಂಧಿ ಬೇಡಿಕೆ ಕರ್ನಾಟಕ ಈಡೇರಿಸಿತು ಎಂದ ರಣದೀಪ್

ಜಿಎಸ್ ಟಿ ಬಗ್ಗೆ ಒಂದು ದಿನದ ಬಳಿಕ ಪ್ರತಿಕ್ರಿಯೆ: ಇದು ಮೋದಿ ಅಲ್ಲ ರಾಹುಲ್ ಗಾಂಧಿ ಸಾಧನೆ ಎಂದ ಸಿದ್ದರಾಮಯ್ಯ

ಮೋದಿ ಜನಪ್ರಿಯತೆ ಸಹಿಸದೇ ಕಾಂಗ್ರೆಸ್ ಹೀಗೆಲ್ಲಾ ಮಾಡ್ತಿದೆ: ಪಿ ರಾಜೀವ್

ಭಾರತ, ರಷ್ಯಾಗೆ ಡೊನಾಲ್ಡ್ ಟ್ರಂಪ್ ಬ್ರೇಕಪ್ ಮೆಸೇಜ್: ಈವಯ್ಯನಿಗೆ ಏನಾಗಿದೆ ಅಂತಿದ್ದಾರೆ ಪಬ್ಲಿಕ್

ಮಹಿಳಾ ಐಪಿಎಸ್ ಅಧಿಕಾರಿ ಜೊತೆ ಅಜಿತ್ ಪವಾರ್ ಬಿಸಿ ಬಿಸಿ ಮಾತು ವಿಡಿಯೋ ವೈರಲ್

ಮುಂದಿನ ಸುದ್ದಿ
Show comments