ರಾಜ್ ಕೋಟ್ : ಗುಜರಾತ್ ನ ಕಚ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ 22 ವರ್ಷದ ತನ್ನ ಸಹೋದರಿಯನ್ನು ಸಾರ್ವಜನಿಕರ ಎದುರೇ 8 ಬಾರಿ ಬಾರಿ ಚಾಕುವಿನಿಂದ ಇರಿದು ಕೊಂದ ಘಟನೆ ನಡೆದಿದೆ.
ಸಂತ್ರಸ್ತೆ ಪತಿಯಿಂದ ದೂರವಾಗಿ ಆಶ್ರಮದಲ್ಲಿ ವಾಸವಾಗಿದ್ದಳು. ಹೀಗಾಗಿ ಅವಳ ನಡತೆಯ ಬಗ್ಗೆ ಹಲವರು ಟೀಕೆ ಮಾಡುತ್ತಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಆರೋಪಿ ಈ ಸಮಸ್ಯೆಯನ್ನು ನಿವಾರಿಸಲು ತನ್ನ ತಂಗಿಯನ್ನು ಸಾರ್ಜಜನಿಕರ ಮುಂದೆಯೇ ಆಕೆ ಸಾಯುವವರೆಗೂ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ.
ಇದನ್ನು ಕೆಲವರು ವಿಡಿಯೋ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರ ಮುಂದೆ ಆರೋಪಿ ಶರಣಾಗಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.