Select Your Language

Notifications

webdunia
webdunia
webdunia
Sunday, 13 April 2025
webdunia

ಕರೆಂಟು ಹೋದ ಟೈಮಲಿ! ಮದುವೆ ಗಂಡೇ ಅದಲು ಬದಲು!

ಮದುವೆ
ಉಜ್ಜೈನಿ , ಮಂಗಳವಾರ, 10 ಮೇ 2022 (09:10 IST)
ಉಜ್ಜೈನಿ: ಕರೆಂಟು ಹೋದ ಟೈಮಲ್ಲಿ ಮದುವೆ ಮನೆಯಲ್ಲಿ ಆದ ಅವಾಂತರದಿಂದ ಸಹೋದರಿ ಮದುವೆಯಾಗಬೇಕಿದ್ದ ವರನನ್ನು ಯುವತಿ ತಾನೇ ವರಿಸಿದ ಘಟನೆ ನಡೆದಿದೆ.

ಮಧ್ಯಪ್ರದೇಶದಲ್ಲಿ ಇಂತಹದ್ದೊಂದು ವಿಚಿತ್ರ ಘಟನೆ ನಡೆದಿದೆ. ಸಹೋದರಿಯರಿಬ್ಬರ ಮದುವೆ ಒಂದೇ ಮಂಟಪದಲ್ಲಿ ನಿಗದಿಯಾಗಿತ್ತು. ಮದುವೆ ಮನೆಯಲ್ಲಿ ವಿದ್ಯುತ್ ಕೈ ಕೊಟ್ಟಿತ್ತು. ಹಾಗಿದ್ದರೂ ಮುಹೂರ್ತಕ್ಕೆ ಸರಿಯಾಗಿ ಮದುವೆ ಶಾಸ್ತ್ರ ಮುಗಿಸಬೇಕೆಂದು ಕತ್ತಲಲ್ಲೇ ಮದುವೆ ಶಾಸ್ತ್ರಗಳು ನಡೆಯಿತು.

ವಧುವಿಗೆ ಇಬ್ಬರಿಗೂ ಮುಖ ಪರದೆ ಹಾಕಲಾಗಿತ್ತು. ಇದರಿಂದಾಗಿಯೇ ಎಡವಟ್ಟಾಗಿತ್ತು. ಮದುವೆ ಶಾಸ್ತ್ರಗಳೆಲ್ಲಾ ಮುಗಿದು ವರನ ಮನೆಗೆ ಹೋದಾಗ ವಧು ಬದಲಾದ ವಿಚಾರ ಬೆಳಕಿಗೆ ಬಂತು. ಕೊನೆಗೆ ಹಿರಿಯರು ಮಾತನಾಡಿ ಮತ್ತೊಮ್ಮೆ ಸರಿಯಾದ ವರನೊಂದಿಗೇ ಮದುವೆ ಶಾಸ್ತ್ರ ಮುಗಿಸಿದರು!

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ್ರೋಹ ಕಾಯ್ದೆಯನ್ನು ಪರಿಶೀಲನೆ : ಸುಪ್ರೀಂ ಕೋರ್ಟ್