Select Your Language

Notifications

webdunia
webdunia
webdunia
webdunia

ಮದುವೆಯಾಗುತ್ತಿರುವ ಪ್ರಿಯತಮೆಯ ಮುಖಕ್ಕೆ ಆಸಿಡ್ ಎರಚಿದ ಪ್ರಿಯಕರ

ಮದುವೆಯಾಗುತ್ತಿರುವ ಪ್ರಿಯತಮೆಯ ಮುಖಕ್ಕೆ ಆಸಿಡ್ ಎರಚಿದ ಪ್ರಿಯಕರ
ಉತ್ತರ ಪ್ರದೇಶ , ಮಂಗಳವಾರ, 19 ಫೆಬ್ರವರಿ 2019 (07:31 IST)
ಉತ್ತರ ಪ್ರದೇಶ : ಮದುವೆ ಸಮಾರಂಭವೊಂದರಲ್ಲಿ ವಧುವಿನ ಮೇಲೆ ಆಕೆಯ ಪ್ರೇಮಿ ಆಸಿಡ್ ಎರಚಿದ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಜಯ್ ವಿಜಯ್ ಗ್ರಾಮದಲ್ಲಿ ನಡೆದಿದೆ.


ಮದುವೆ ನಡೆದ ನಂತರ ರಿಸೆಪ್ಷನ್ ನಡೆಯುತ್ತಿರುವ ವೇಳೆ ಕುಟುಂಬಸ್ಥರು ಸಂಬಂಧಿಕರ ಸ್ವಾಗತದಲ್ಲಿ ನಿರತರಾಗಿದ್ದರು. ಆ ವೇಳೆ ಸಮಾರಂಭಕ್ಕೆ ಬಂದ ವಧುವಿನ ಪ್ರೇಮಿ ವೇದಿಕೆ ಮೇಲೆ ಹೋಗಿ ವಧುವಿನ ಮುಖಕ್ಕೆ ಎಸಿಡ್ ಎರಚಿ ಪರಾರಿಯಾಗಿದ್ದಾನೆ.


ಈ ಘಟನೆಯಲ್ಲಿ ವಧುವಿನ ಮುಖ, ಕಣ್ಣು, ಕೈ  ಸೇರಿ ಶೇಕಡಾ 50 ರಷ್ಟು ದೇಹ ಭಾಗ ಸುಟ್ಟು ಹೋಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಜಿಂದಾಬಾದ್ ಎಂದ ಶಿಕ್ಷಕಿಗೆ ನ್ಯಾಯಾಂಗ ಬಂಧನ