Publish Date: Sun, 28 Feb 2021 (07:09 IST)
Updated Date: Sun, 28 Feb 2021 (07:12 IST)
ಮೀರತ್ : 17 ವರ್ಷದ ಹುಡುಗಿಗೆ ಅವಳ ಮಾಜಿ ಗೆಳೆಯ ಅವರಿಬ್ಬರು ಕ್ಲೋಸ್ ಆಗಿರುವ ಫೋಟೊ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ ಘಟನೆ ಮೀರತ್ ನಲ್ಲಿ ನಡೆದಿದೆ.
ಹುಡುಗಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಇತ್ತೀಚೆಗೆ ಅವರ ಸಂಬಂಧ ಮುರಿದು ಬಿದ್ದಿದೆ. ಈ ಹಿನ್ನಲೆಯಲ್ಲಿ ಯುವಕ ಅವರಿಬ್ಬರ ಕ್ಲೋಸ್ ಆಗಿರುವ ಫೋಟೊ ಇಟ್ಟುಕೊಂಡು ಬೆದರಿಸಲು ಶುರು ಮಾಡಿದ್ದಾನೆ. ಇದರಿಂದ ನೊಂದ ಹುಡುಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಗ ಮನೆಯವರು ಪೊಲೀಸರಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ.