Publish Date: Wed, 30 Dec 2020 (11:11 IST)
Updated Date: Wed, 30 Dec 2020 (11:13 IST)
ನವದೆಹಲಿ: ತಾಯಿ ಅಕ್ರಮ ಸಂಬಂಧ ಮುಂದುವರಿಸಲು ಒಪ್ಪದೇ ಇದ್ದಿದ್ದಕ್ಕೆ ಆಕೆಯ ಮಗನನ್ನು ಪ್ರಿಯಕರ ಮತ್ತು ಸ್ನೇಹಿತರು ಸೇರಿಕೊಂಡು ಅಪಹರಿಸಿ ಹತ್ಯೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಆರೋಪಿಗಳಲ್ಲಿ ಒಬ್ಬಾತನಾಗಿರುವ ಪ್ರದೀಪ್ ಎಂಬಾತನ ಜೊತೆ ಮಹಿಳೆ ಸಂಬಂಧ ಹೊಂದಿದ್ದಳು. ಆದರೆ ಆತ ವಿವಾಹಿತನಾಗಿದ್ದ. ಹೀಗಾಗಿ ಆತನ ಪತ್ನಿಯ ಮನೆಯವರು ಆತನಿಂದ ಬೇರಾಗುವಂತೆ ಒತ್ತಡ ಹೇರಿದ್ದರು. ಹೀಗಾಗಿ ಮಹಿಳೆ ಆರೋಪಿ ಪ್ರದೀಪ್ ಬಳಿ ಪತ್ನಿಗೆ ವಿಚ್ಛೇದನ ನೀಡಿ ತನ್ನ ಜೊತೆ ಸಂಬಂಧ ಮುಂದುವರಿಸಲು ಹೇಳಿದ್ದರು. ಆದರೆ ಆತ ಅದಕ್ಕೆ ಒಪ್ಪಲಿಲ್ಲ. ಹೀಗಾಗಿ ಮಹಿಳೆ ಆತನೊಂದಿಗೆ ಸಂಬಂಧ ಮುರಿದುಕೊಂಡಿದ್ದಳು. ಇದು ಆರೋಪಿಯನ್ನು ರೊಚ್ಚಿಗೆಬ್ಬಿಸಿತ್ತು. ಇದೇ ಸಿಟ್ಟಿನಲ್ಲಿ ತನ್ನ ನಾಲ್ವರು ಸ್ನೇಹಿತರ ಸಹಾಯದಿಂದ ಆಕೆಯ 15 ವರ್ಷದ ಮಗನನ್ನು ಅಪಹರಿಸಿ, ಹತ್ಯೆ ಮಾಡಿದ್ದಾರೆ. ಇದೀಗ ಆರೋಪಿಗಳಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.