Publish Date: Wed, 30 Dec 2020 (10:03 IST)
Updated Date: Wed, 30 Dec 2020 (10:05 IST)
ನವದೆಹಲಿ: ಮಲ ಮಡದಿ ಜೊತೆ ಜಗಳವಾದ ಬಳಿಕ ಪಾಪಿ ತಂದೆ 8 ವರ್ಷದ ಮಗನ ಜೊತೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಬಾಲಕ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಓಸ್ಮಾನ್ ಬಾದ್ ನಲ್ಲಿ ನಡೆದಿದೆ.
ಮಲ ಮಗ ತಮ್ಮ ಜೊತೆಗಿರುವುದು ಮಹಿಳೆಗೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಸದಾ ಪತಿಯ ಜೊತೆ ಜಗಳವಾಗುತ್ತಿತ್ತು. ಇದುವೇ ತಾರಕಕ್ಕೇರಿ ತಂದೆ ಹಾಗೂ ಮಗ ಬಾವಿಗೆ ಹಾರಿದ್ದರು. ಈ ವೇಳೆ ಮಗ ಸಾವಿಗೀಡಾಗಿದ್ದು, ತಂದೆ ಬದುಕುಳಿದಿದ್ದಾನೆ. ಇದೀಗ ತಂದೆ-ಮಲತಾಯಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.