Publish Date: Thu, 02 Nov 2023 (13:43 IST)
Updated Date: Thu, 02 Nov 2023 (13:50 IST)
ಆಗ್ರಾ ತಾಜ್‌ಮಹಲ್‌ಗಾಗಿ ಎಷ್ಟು ಪ್ರಸಿದ್ದಿ ಪಡೆದಿದೆಯೋ ಅಷ್ಟೇ ಪ್ರಸಿದ್ದಿಯನ್ನು ವೇಶ್ಯಾವಾಟಿಕೆಗಾಗಿ ಪಡೆದಿದೆ. ನಗರದ ಬಾಸಾಯಿ, ಸಿಕಾಂದ್ರಾ. ಮಾಲ್ ಕಾ ಬಜಾರ್ ಮತ್ತು ಸಿಯೋ ಕಾ ಬಾಜಾರ್ ಪ್ರದೇಶಗಳು ಪ್ರಮುಖ ವೇಶ್ಯಾವಾಟಿಕೆ ಕೇಂದ್ರಗಳಾಗಿವೆ.
ನೆರೆಹೊರೆಯವರು ನೀಡಿದ ದೂರಿನ ಮೇರೆಗೆ ಎರಡಂತಸ್ತಿನ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ವೇಶ್ಯೆಯರು ಸೇರಿದಂತೆ 11 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಗ್ರಾಹಕರನ್ನು ಫೇಸ್‌ಬುಕ್ ಮೂಲಕ ಬುಕ್ ಮಾಡಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು. 11 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಾಲ್ಕೇಶವರ್ ಪ್ರದೇಶದ ಗೋವಿಂದ್ ಪುರಿ ಕಾಲೋನಿಯ ನಿವಾಸಿಗಳು ನಿರಂತರವಾಗಿ ಪೊಲೀಸ್ ಠಾಣೆಗೆ ದೂರು ನೀಡಿ ಸೆಕ್ಸ್ ರಾಕೆಟ್ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ಪೊಲೀಸ್ ತಂಡ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿದಾಗ ಬಿಯರ್, ಕಾಂಡೋಮ್‌ಗಳು ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಫೇಸ್‌ಬುಕ್‌ನ ಚಾಂಟಿಂಗ್ ನೆಪದಲ್ಲಿ ಗ್ರಾಹಕರನ್ನು ಸೆಳೆಯುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.