Select Your Language

Notifications

webdunia
webdunia
webdunia
webdunia

ಸಾಮಾಜಿಕ ತಾಣ: ಮಾವ ತಪ್ಪಾಗಿ ಸೊಸೆಯೊಂದಿಗೆ ಲೈಂಗಿಕ ಡೇಟ್ ಫಿಕ್ಸ್‌

ಸಾಮಾಜಿಕ ತಾಣ: ಮಾವ ತಪ್ಪಾಗಿ ಸೊಸೆಯೊಂದಿಗೆ ಲೈಂಗಿಕ ಡೇಟ್ ಫಿಕ್ಸ್‌
shanghai , ಗುರುವಾರ, 2 ನವೆಂಬರ್ 2023 (12:42 IST)
ವಾಂಗ್ ಪೈ ಮತ್ತು ಲಿಲಿ ಆನ್‌ಲೈನ್ ಚಾಟಿಂಗ್ ಮೂಲಕ ಪರಸ್ಪರ ಪರಿಚಿತರಾದರು. ಪ್ರತಿ ನಿತ್ಯ ಚಾಟ್ ಮಾಡುತ್ತಿದ್ದ ಅವರು ಪರಸ್ಪರರ ಮುಖ ನೋಡಿಯೇ ಇರಲಿಲ್ಲ.ಒಂದು ದಿನ ಸೆಕ್ಸ್ ಅನುಭವಕ್ಕಾಗಿ ಡೇಟ್ ಫಿಕ್ಸ್ ಮಾಡಿದರು. ಉಭಯರು ಮುಲಿಂಗ್ ಸಿಟಿ ಮೂಲದವರಾಗಿದ್ದು, ಒಂದು ಬಾರಿಯೂ ನೇರವಾಗಿ ಭೇಟಿ ಮಾಡಿ ಮಾತನಾಡುವ ಅವಕಾಶ ಬಂದಿರಲಿಲ್ಲ
 
57 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನ ಚಾಟಿಂಗ್ ಹವ್ಯಾಸ ಆಘಾತಕಾರಿ ಅನುಭವವೊಂದಕ್ಕೆ ಸಾಕ್ಷಿಯಾಗಿದೆ. ಆ ವ್ಯಕ್ತಿ ಅಪರಿಚಿತ ಯುವತಿಯೊಂದಿಗೆ ಸೆಕ್ಸ್ ಡೇಟ್ ಫಿಕ್ಸ್‌ ಮಾಡಿದ ನಂತರ ಗೊತ್ತಾಗಿದ್ದು ಆಕೆ ಬೇರಾರು ಅಲ್ಲ ತನ್ನ ಸೊಸೆ ಎಂದು.
 
ವಾಂಗ್ ಪೈ ತನ್ನ ಪ್ರೋಫೈಲ್‌ನಲ್ಲಿ ಸೇನಾಪಡೆಯ ಫೋಟೋ ಬಳಸುತ್ತಿದ್ದರೆ ಲಿಲ್ಲಿ ತನ್ನ ಪ್ರೋಫೈಲ್‌ಗೆ ನಕಲಿ ಫೋಟೋ ಬಳಸುತ್ತಿದ್ದಳು. ಲಿಲ್ಲಿ ವಾಂಗ್‌ನೊಂದಿಗೆ ಚಾಟ್ ಮಾಡುವಾಗ ಮಿಂಗ್ ಚೆನ್ ಎನ್ನುವ ನಕಲಿ ಹೆಸರು ಬಳಕೆ ಮಾಡುತ್ತಿದ್ದಳು.
 
ಸೆಕ್ಸ್ ಅನುಭವಕ್ಕಾಗಿ ಫಿಕ್ಸ್ ಮಾಡಿದ ಡೇಟ್ ಬಂದೇಬಿಟ್ಟಿತು. ಉಭಯರು ಮುಖಾಮುಖಿಯಾದಾಗ ಇಬ್ಬರಿಗೂ ಆಘಾತವಾಯಿತು. ತಾನು ಚಾಟಿಂಗ್ ಮಾಡುತ್ತಿದ್ದ ವ್ಯಕ್ತಿ ತನ್ನ ಮಾವ ಎಂದು ತಿಳಿದು ಲಿಲ್ಲಿ ಅಲ್ಲಿಂದ ಪರಾರಿಯಾದಳು.
 
ಲಿಲ್ಲಿ ಪತಿ ವಾಂಗ್ ಜೈ ತನ್ನ ಪತ್ನಿಯ ಕಂಪ್ಯೂಟರ್‌ನಲ್ಲಿರುವ ಇ-ಮೇಲ್‌ಗಳನ್ನು ಚೆಕ್ ಮಾಡಿ ವಾಂಗ್ ಮತ್ತು ಲಿಲ್ಲಿ ಭೇಟಿ ಮಾಡುವ ಹೋಟೆಲ್ ಕೋಣೆಗೆ ಬಂದಾಗ ಪ್ರಕರಣಕ್ಕೆ ಮತ್ತಷ್ಟು ತಿರುವು ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ರೀತಿಯ ಐಸ್ಕ್ರೀಮ್ ನೀವು ಎಂದಿಗೂ ಊಹಿಸುವುದಿಲ್ಲ