Publish Date: Tue, 14 Jul 2026 (10:14 IST)
Updated Date: Tue, 14 Jul 2026 (10:17 IST)
ನವದೆಹಲಿ: ರಾಹುಲ್ ಗಾಂಧಿ 20 ದಿನದಿಂದ ವಿದೇಶದಲ್ಲೇ ಇದ್ರು. ಇಷ್ಟು ದಿನ ಎಲ್ಲಿ ಹೋಗಿದ್ರು, ಎಲ್ಲಿದ್ರು ಯಾಕೆ ಈ ಗುಪ್ತ್ ಗುಪ್ತ್ ಭೇಟಿ ಎಂದು ಯಾರಾದ್ರೂ ಪ್ರಶ್ನೆ ಮಾಡಿದ್ರಾ? ಹೀಗಂತ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳ್ವಿಯಾ ಕಿಡಿ ಕಾರಿದ್ದಾರೆ.
ರಾಹುಲ್ ಗಾಂಧಿ ಕಳೆದ 20 ದಿನಗಳಿಂದ ವಿದೇಶದಲ್ಲಿದ್ದರು. ಇದೀಗಷ್ಟೇ ಭಾರತಕ್ಕೆ ಬಂದಿಳಿದಿದ್ದಾರೆ. ಅವರು ಇಷ್ಟು ದಿನ ಎಲ್ಲಿದ್ದರು ಎಂಬ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಈ ಕುರಿತು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳ್ವಿಯಾ ಪ್ರಶ್ನೆ ಮಾಡಿದ್ದಾರೆ.
ಜೂನ್ 22 ರಿಂದ ಜುಲೈ 13 ರವರೆಗೆ ರಾಹುಲ್ ಗಾಂಧಿ ವಿದೇಶ ಯಾತ್ರೆಯಲ್ಲಿದ್ದರು. ಅವರು ಎಲ್ಲಿದ್ದರು? ಯಾರನ್ನು ಭೇಟಿ ಮಾಡಿದ್ದರು? ಅವರ ಯಾತ್ರೆ ಮತ್ತು ವಸತಿಗೆ ಯಾರು ಪ್ರಾಯೋಜಕತ್ವ ನೀಡಿದ್ದು? ಈ ಎಲ್ಲಾ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಸ್ಪಷ್ಟನೆ ನೀಡಬೇಕು. ಅವರ ವಿದೇಶಿ ಕಾರ್ಯಕ್ರಮಗಳು ಭಾರತದ ರಾಜಕೀಯ ಅಥವಾ ಕಾರ್ಯತಂತ್ರದ ಹಿತಾಸಕ್ತಿಗಳ ಮೇಲೆ ಪ್ರಭಾವ ಬೀರಬಲ್ಲಂತಹ ಸಭೆಗಳನ್ನು ಒಳಗೊಂಡಿದ್ದವೇ ಎಂಬುದನ್ನು ತಿಳಿಯುವ ಹಕ್ಕು ಸಾರ್ವಜನಿಕರಿಗೆ ಇದೆ ಎಂದಿದ್ದಾರೆ.
ರಾಹುಲ್ ಗಾಂಧಿ ಎಲ್ಲಿದ್ದರು, ಯಾರ ಜೊತೆ ರಜೆ ಕಳೆದಿದ್ದರು? ಆಗಾಗ ವಿದೇಶಕ್ಕೆ ಹೋಗುವುದು ಯಾಕೆ ಎಂದು ಯಾರಾದರೂ ಪ್ರಶ್ನೆ ಮಾಡಿದ್ದಾರಾ? ಯಾರಿಗೂ ಅವರಿಗೆ ಎಲ್ಲಿಗೆ ಹೋಗುತ್ತಾರೆ ಎನ್ನುವುದು ಗೊತ್ತಿರಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ