Publish Date: Wed, 29 Apr 2026 (12:10 IST)
Updated Date: Wed, 29 Apr 2026 (12:15 IST)
ನವದೆಹಲಿ: ಒಂದೆಡೆ ಪಶ್ಚಿಮ ಬಂಗಾಲದಲ್ಲಿ ಚುನಾವಣೆ ಕಾವೇರುತ್ತಿದ್ದರೆ ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿಕೋಬಾರ್ ದ್ವೀಪದಲ್ಲಿ ಚಿಲ್ ಮಾಡುತ್ತಿದ್ದಾರೆ.
ಕೇರಳ ಬಳಿಕ ತಮಿಳುನಾಡಿನಲ್ಲಿ ಚುನಾವಣೆ ಪ್ರಚಾರ ನಡೆಸಿದ ರಾಹುಲ್ ಗಾಂಧಿ ಪಶ್ಚಿಮ ಬಂಗಾಲದ ಕಡೆಗೆ ಹೆಚ್ಚು ಗಮನ ಕೊಟ್ಟಿರಲಿಲ್ಲ. ಇದೀಗ ಚುನಾವಣೆ, ರಾಜಕೀಯದಿಂದ ಕೊಂಚ ಬಿಡುವು ಪಡೆದಿರುವ ರಾಹುಲ್ ಪ್ರವಾಸದಲ್ಲಿದ್ದಾರೆ.
ನಿಕೋಬಾರ್ ದ್ವೀಪದ ಕಡಲ ಕಿನಾರೆ, ಮರ ಗಿಡಗಳ ನಡುವೆ ಕಾಲ ಕಳೆಯುತ್ತಿದ್ದಾರೆ. ಇಲ್ಲಿನ ಸುಂದರ ಕಡಲ ಕಿನಾರೆಗೆ ತೆರಳಿದ್ದ ರಾಹುಲ್ ಲೈಟ್ ಹೌಸ್ ಬಳಿ ಪೋಸ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಇಲ್ಲಿಗೆ ಬಂದಿದ್ದ ತಮ್ಮ ಅಜ್ಜಿ ಇಂದಿರಾ ಗಾಂಧಿಯವರನ್ನು ನೆನೆಸಿಕೊಂಡಿದ್ದಾರೆ.
ಇದಲ್ಲದೆ ಇಲ್ಲಿನ ಹಸಿರುವನಗಳ ಬಗ್ಗೆ ಮಾತನಾಡಿದ್ದು ಇಂತಹ ಸುಂದರ ಕಾಡನ್ನು ನಾವು ಎಲ್ಲೂ ನೋಡಲು ಸಾಧ್ಯವಿಲ್ಲ. ಇದೊಂದು ವಿಶೇಷ ಸ್ಥಳ ಎಂದು ಹಾಡಿ ಹೊಗಳಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ