Publish Date: Wed, 05 Dec 2018 (09:07 IST)
Updated Date: Wed, 05 Dec 2018 (09:10 IST)
ಲಕ್ನೋ: ಹನುಮಾನ್ ಬಗ್ಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಇದೀಗ ಬಿಜೆಪಿಯ ಸಂಸದೆ ಸಾವಿತ್ರಿ ಫುಲೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹನುಮಂತ ದಲಿತನಾಗಿದ್ದ ಮತ್ತು ಮನುವಾದಿಗಳ ಸೇವಕನಾಗಿದ್ದ. ರಾಮನಿಗೆ ಅಷ್ಟೆಲ್ಲಾ ಸೇವೆ ಮಾಡಿದರೂ ಹನುಮಂತನನ್ನು ಮಂಗನಂತೆ ಚಿತ್ರಿಸಲಾಯಿತು. ದಲಿತರನ್ನೂ ಮಂಗ ಮತ್ತು ರಾಕ್ಷಸರು ಎಂದೇ ಪರಿಗಣಿಸಲಾಗುತ್ತಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
‘ರಾಮನಿಗೆ ಅಷ್ಟೆಲ್ಲಾ ಸೇವೆ ಮಾಡಿದರೂ ಹನುಮಂತನನ್ನು ಮಂಗನಾಗಿ ಯಾಕೆ ಚಿತ್ರಿಸಲಾಯಿತು? ಅವನನ್ನು ಯಾಕೆ ಮನುಷ್ಯನನ್ನಾಗಿ ಮಾಡಲಿಲ್ಲ? ಆ ಕಾಲದಲ್ಲೇ ಹನುಮಂತ ದಲಿತ ಎನ್ನುವ ಕಾರಣಕ್ಕೆ ಅಷ್ಟೊಂದು ಅವಮಾನಕ್ಕೆ ಗುರಿಯಾಗಬೇಕಾಯಿತು. ಅಂದರೆ ದಲಿತರೂ ಮನುಷ್ಯರಲ್ಲವೇ?’ ಎಂದು ಸಂಸದೆ ಸಾವಿತ್ರಿ ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.