ಬೆಂಗಳೂರು : ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ಮಾಸದಲ್ಲಿ ಅನೇಕ ದೇವಾನುದೇವತೆಗಳ ಪೂಜೆಗಳನ್ನು ಮಾಡಲಾಗುತ್ತದೆ. ಈ ಶ್ರಾವಣ ಮಾಸದಲ್ಲಿ ಮಂಗಳವಾರದಂದು ಈ ಚಿಕ್ಕ ಕೆಲಸವೊಂದನ್ನು ಮಾಡಿದರೆ ನಿಮಗೆ ಹಣದ ಕೊರತೆ ಎಂದಿಗೂ ಎದುರಾಗುವುದಿಲ್ಲ.
ಶ್ರಾವಣ ಮಾಸದಲ್ಲಿ ಯಾವುದೇ ಮಂಗಳವಾರದಂದು ಆಲದ ಮರದ ಎಲೆಯನ್ನು ತೆಗೆದುಕೊಂಡು ಅದನ್ನು ಶುದ್ದ ನೀರಿನಿಂದ ಸ್ವಚ್ಚಮಾಡಿ ಅದನ್ನು ಹನುಮಂತನ ಫೋಟೊ ಮುಂದೆ ಇಟ್ಟು ಕೇಸರಿ ಪುಡಿಯಿಂದ ಅದರ ಮೇಲೆ ಶ್ರೀರಾಮವೆಂದು ಬರೆಯಬೇಕು.
ಹಾಗೇ ಆ ಕೇಸರಿಯ ಪುಡಿಯನ್ನು ಹಣೆಗೆ ತಿಲಕವಾಗಿ ಹಚ್ಚಿಕೊಳ್ಳಬೇಕು. ನಂತರ ಆ ಎಲೆಯನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಮುಂದಿನ ಶ್ರಾವಣ ಮಾಸದಂದು ಆ ಹಳೆಯ ಎಲೆಯನ್ನು ನೀರಿನಲ್ಲಿ ತೇಲಿ ಬಿಡಿ. ನಂತರ ಹೊಸ ಎಲೆ ತಂದು ಮತ್ತೆ ಇದೇ ರೀತಿ ಮಾಡಿ. ಹೀಗೆ ಮಾಡುವುದರಿಂದ ನಿಮಗೆ ಎಂದು ಹಣದ ಸಮಸ್ಯೆ ಎದುರಾಗಲ್ಲ. ನಿಮ್ಮ ಪರ್ಸ್ ನಲ್ಲಿ ಹಣ ಯಾವಾಗಲೂ ಇರುತ್ತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ